ಚೆನ್ನೈ: ಪಾಪಿಯೊಬ್ಬ ನರ್ಸಿಂಗ್ ವಿದ್ಯಾರ್ಥಿನಿ ಕೊಲೆ ಮಾಡಿ ಆಕೆಯ ಫೋನ್ ನಲ್ಲಿಯೇ ಸ್ಟೇಟಸ್ ಹಾಕಿರುವ ಘಟನೆಯೊಂದು ನಡೆದಿದೆ.
ಚೆನ್ನೈನಲ್ಲಿ (Chennai) ಈ ದುರ್ಘಟನೆ ನಡೆದಿದೆ. ಸ್ಟೇಟಸ್ ನಲ್ಲಿ ಆಕೆಯ ಫೋಟೋ ಕಂಡು ಸ್ನೇಹಿತರು ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿನಿಯ ಕೊಲೆಯನ್ನು ಲಾಡ್ಜ್ ನಲ್ಲಿ ಮಾಡಿದ್ದು, ಅಲ್ಲಿಯ ಸಿಸಿಟಿವಿ ಪರಿಶೀಲಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿಯನ್ನು ಕೇರಳದ ಕೊಲ್ಲಂನ ಫೌಸಿಯಾ (20) ಎನ್ನಲಾಗಿದೆ. ಆಶಿಕ್ (20) ಹತ್ಯೆ ಮಾಡಿದ ಆರೋಪಿ. ಕೊಲೆಯಾದ ವಿದ್ಯಾರ್ಥಿನಿ ನರ್ಸಿಂಗ್ ಓದುತ್ತಿದ್ದರು ಎನ್ನಲಾಗಿದೆ. ನ್ಯೂ ಕಾಲೋನಿಯ ಹಾಸ್ಟೆಲ್ ನಲ್ಲಿ ಇರುತ್ತಿದ್ದರು.
ಫೌಸಿಯಾ ಹಾಗೂ ಆಶಿಕ್ ಐದು ವರ್ಷಗಳಿಂದ ಸಂಬಂಧ ಹೊಂದಿದ್ದು, ರಹಸ್ಯವಾಗಿ ಮದುವೆಯಾಗಿದ್ದರು ಎನ್ನಲಾಗಿದೆ. ಅಪ್ರಾಪ್ತ ವಯಸ್ಸಿನಲ್ಲೇ ಮಗು ಜನಿಸಿದ್ದು, ಮಗುವನ್ನು ಚಿಕ್ಕಮಗಳೂರಿನಲ್ಲಿ ದತ್ತು ನೀಡಿದ್ದರು. ಆಶಿಕ್ ಜೊತೆ ಇನ್ನೊಬ್ಬ ಮಹಿಳೆಯ ಫೋಟೋ ಇದ್ದ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.