ಪ್ಯಾಲೆಸ್ತೇನ್ನ ಗಾಜಾ (Gaza) ಪಟ್ಟಿಯ ಭಾಗದಿಂದ ಇಸ್ರೇಲ್ ಮೇಲೆ 5 ಸಾವಿರ ರಾಕೆಟ್ ಗಳ ದಾಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಯುದ್ಧವನ್ನೇ ಘೋಷಣೆ ಮಾಡಿದೆ.
ಬೆಳಗ್ಗೆಯಿಂದಲೇ ಇಸ್ರೇಲ್ ಮೇಲೆ ರಾಕೆಟ್ ದಾಳಿ ಆರಂಭವಾಗಿದ್ದು, ದಿಗ್ಭಂಧನಕ್ಕೊಳಗಾಗಿರುವ ಗಾಜಾ ಪಟ್ಟಿಯ ಹಲವಾರು ಕಡೆಗಳಿಂದ ರಾಕೆಟ್ ಉಡಾಯಿಸಲಾಗಿದೆ. ಹಮಾಸ್ ಉಗ್ರಗಾಮಿಗಳು ಇದನ್ನು “ಮೊದಲ ದಾಳಿ” ಎಂದು ಕರೆದಿದ್ದಾರೆ. ಇಸ್ರೇಲ್ ರಕ್ಷಣಾ ಪಡೆ ಯುದ್ಧದ ಸ್ಥಿತಿ ಘೋಷಿಸಿದ್ದರಿಂದಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ.
ಇಸ್ರೇಲ್ನಲ್ಲಿ ಭಯೋತ್ಪಾದಕರೆಂದು ಪರಿಗಣಿಸಲ್ಪಟ್ಟಿರುವ ಹಮಾಸ್ ಉಗ್ರಗಾಮಿಗಳ ಒಳನುಸುಳುವಿಕೆಯ ಕುರಿತು ರಕ್ಷಣಾ ಪಡೆಗಳು ಎಚ್ಚರಿಕೆ ನೀಡಿವೆ. ಈ ದಾಳಿಯಲ್ಲಿ ಪ್ಯಾರಾಗ್ಲೈಡರ್ಗಳನ್ನು ಬಳಸಲಾಗಿದ್ದು, ಇಸ್ರೇಲ್ ಆ ದೃಶ್ಯದ ತುಣುಕುಗಳನ್ನು ಬಿಡುಗಡೆ ಮಾಡಿದೆ.
ಉಕ್ರೇನ್ ಹಾಗೂ ರಷ್ಯಾ ಯುದ್ಧದ ನಂತರ ಈ ವರ್ಷದಲ್ಲಿ ಇದು ಎರಡನೇ ಯುದ್ಧವಾಗಿದೆ. ಗಾಜಾ ಪಟ್ಟಿಯ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ತಮ್ಮ ಮನೆಗಳಲ್ಲಿಯೇ ಉಳಿಯಲು ಸೂಚಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಮಾಹಿತಿ ನೀಡಿವೆ.