ಬಾಲಿವುಡ್ ಸಿಂಗರ್ ಅನುರಾಧಾ ಪೌಡ್ವಾಲ್ ಬಿಜೆಪಿ ಸೇರಿದ್ದಾರೆ.
ಈ ಮೂಲಕ ರಾಜಕೀಯ ಅಖಾಡಕ್ಕೆ ಕಾರವಾರದ 69 ವರ್ಷದ ಗಾಯಕಿ ಎಂಟ್ರಿಕೊಟ್ಟಿದ್ದಾರೆ. ಸನಾತನ ಧರ್ಮದ ಪರಂಪರೆ ಕಾಪಾಡಿಕೊಂಡು ಬಂದಿರುವ ಬಿಜೆಪಿ ಪಕ್ಷಕ್ಕೆ ನಾನು ಸೇರುತ್ತಿದ್ದೇನೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ನಾನು ಬಿಜೆಪಿ ಸೇರುತ್ತಿರುವುದು ನನ್ನ ಅದೃಷ್ಟ ಎಂದು ಗಾಯಕಿ ಅನುರಾಧಾ ಹೇಳಿದ್ದಾರೆ.
ಕರ್ನಾಟಕದ ಕಾರವಾರದಲ್ಲಿ ಜನಿಸಿದ ಅನುರಾಧಾ ಪೌಡ್ವಾಲ್ ದೇಶದ ಬೇರೆ ಬೇರೆ ಭಾಷೆಗಳು ಸೇರಿದಂತೆ ಸುಮಾರು 9 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ನನ್ನ ಪ್ರೀತಿಯ ಹುಡುಗಿ, ಪ್ರೀತ್ಸೆ ಚಿತ್ರದ ಹಾಡುಗಳು ಸೇರಿದಂತೆ ಹಲವು ಚಿತ್ರಗಳಿಗೆ ಧ್ವನಿ ನೀಡಿದ್ದಾರೆ.