ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಮಾರುತ್ತಿದ್ದ ವಿದೇಶಿ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಅಮೃತಹಳ್ಳಿ ಠಾಣೆ ಪೊಲೀಸರು ಜೀರಿಯಾ ಮೂಲದ ಡ್ಯಾನೀಯಲ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಡ್ಯಾನೀಯಲ್ ವಾಟ್ಸಾಪ್ ಮೂಲಕ ಕಸ್ಟಮರ್ ಸಂಪರ್ಕಿಸುತ್ತಿದ್ದ ಎನ್ನಲಾಗಿದೆ. ನಂತರ ತನ್ನ ಅಕೌಂಟ್ಗೆ ಯುಪಿಐ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದ. ಆನಂತರ ಲೋಕೇಷನ್ವೊಂದರಲ್ಲಿ ಡ್ರಗ್ಸ್ ಇಟ್ಟು ಅಲ್ಲಿಂದ ಪರಾರಿಯಾಗುತ್ತಿದ್ದ.
ಆ ವೇಳೆ ಡ್ರಗ್ಸ್ ಬೇಕಾದವರು ಆತ ಹೇಳಿದ ಜಾಗಕ್ಕೆ ಬಂದು ಅದನ್ನು ಪಡೆಯುತ್ತಿದ್ದರು. ಆರೋಪಿಯು ಒಟ್ಟು 5 ಬ್ಯಾಂಕ್ ಅಕೌಂಟ್ ಹೊಂದಿದ್ದು, ಕೇವಲ ಮೂರೇ ತಿಂಗಳಲ್ಲಿ ಆತನ ಅಕೌಂಟ್ ಗೆ 25 ಲಕ್ಷ ರೂ. ಹಣ ವರ್ಗಾವಣೆ ಆಗಿತ್ತು ಎನ್ನಲಾಗಿದೆ. ಸದ್ಯ ಆರೋಪಿ ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.