ಬಿಹಾರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇದ್ದ ವೇದಿಕೆ ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಬಿಹಾರದ ಪಾಲಿಗಂಜ್ ನಲ್ಲಿ ಪ್ರಚಾರ ರ್ಯಾಲಿ ನಡೆಯುತ್ತಿದ್ದ ಸಂದರ್ಭದಲ್ಲಿ ವೇದಿಕೆಯ ಒಂದು ಭಾಗ ಕುಸಿದಿದೆ. ಈ ವೇಳೆ ಪಕ್ಷದ ನಾಯಕರು ಹಾಗೂ ಪಾಟ್ಲಿಪುತ್ರ ಲೋಕಸಭೆ ಕ್ಷೇತ್ರದ ಆರ್ಜೆಡಿ ಅಭ್ಯರ್ಥಿ ಮಿಸಾ ಭಾರತಿ ಧಾವಿಸಿದ್ದಾರೆ.
ಆದರೆ, ಘಟನೆಯಲ್ಲಿ ಯಾರಿಗೂ ತೊಂದರೆಗಳಾಗಿಲ್ಲ. ಈ ಕಾರ್ಯಕ್ರಮದಲ್ಲಿ ತೇಜಸ್ವಿ ಯಾದವ್ ಕೂಡ ಭಾಗವಹಿಸಿದ್ದರು. ನಂತರ ರಾಹುಲ್ ಗಾಂಧಿ ಅವರನ್ನು ಭದ್ರತಾ ಸಿಬ್ಬಂದಿ ವೇದಿಕೆಯಿಂದ ಕೆಳಗಿಸಿದ್ದಾರೆ. ವೇದಿಕೆ ಸರಿಗೊಂಡ ನಂತರ ರಾಹುಲ್ ಗಾಂಧಿ ತಮ್ಮ ಭಾಷಣ ಮುಂದುವರಿಸಿದರು.