ಜೆರುಸಲೆಂ: ಇಸ್ರೇಲ್ ಹಾಗೂ ಉಗ್ರರ ಮಧ್ಯೆ ನಡೆಯುತ್ತಿರುವ ಯುದ್ಧ ಭೀಕರತೆ ಪಡೆದಿದೆ. ಈ ಯುದ್ಧ ಬಹುತೇಕವಾಗಿ ವಾಯು ಮಾರ್ಗದ ಮೂಲಕ ನಡೆಯುತ್ತಿದೆ. ಸದ್ಯ ಇಸ್ರೇಲ್ ನಲ್ಲಿ ಹಮಾಸ್ ಬಂಡುಕೋರರ ಅಟ್ಟಹಾಸಕ್ಕೆ ಹಿಂದಿ ಕಿರುತೆರೆ ನಟಿ ಬಲಿಯಾಗಿದ್ದಾರೆ.
ಹಿಂದಿ ಕಿರುತೆರೆ ನಟಿ ಮಧುರಾ ನಾಯ್ಕ್ (Madhura Naik) ಕುಟುಂಬಸ್ಥರನ್ನು ಇಸ್ರೇಲ್ ನಲ್ಲಿ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಮಧುರಾ ನಾಯ್ಕ್ ಅವರು, ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಸಹೋದರಿ ಮತ್ತು ಆಕೆಯ ಪತಿಯನ್ನು ಹಮಾಸ್ (Hamas Terrorists) ಬಂಡೋಕೋರರು ಹತ್ಯೆ ಮಾಡಿದ್ದಾರೆ. ಮಕ್ಕಳ ಎದುರೇ ಅವರನ್ನು ಕೊಲೆ ಮಾಡಿದ್ದಾರೆ ಎಂದು ಕಣ್ಣೀರು ಸುರಿಸಿದ್ದಾರೆ.
ಒಂದೆಡೆ ಹಮಾಸ್ ನಿರಂತರ ರಾಕೆಟ್ ದಾಳಿ ನಡೆಸುತ್ತಿದ್ದರೆ ಮತ್ತೊಂದು ಕಡೆ ಇಸ್ರೇಲ್ ಯುದ್ಧ ವಿಮಾನಗಳ ಏರ್ ಸ್ಟೈಕ್ ಮಾಡುತ್ತಿದೆ. ಇಸ್ರೇಲ್ನ ಅಶ್ಕೆಲೋನ್ ಮೇಲೆ ಹಮಾಸ್ ರಾಕೆಟ್ ದಾಳಿ ಮಾಡಿತ್ತು. ಇಸ್ರೇಲ್ನ ಐರನ್ ಡೋಮ್ ರಕ್ಷಣಾ ಕ್ಷಿಪಣಿ ವ್ಯವಸ್ಥೆಯಿಂದ ರಾಕೆಟ್ಗಳನ್ನು ತಡೆದು ಗಾಳಿಯಲ್ಲಿ ನಾಶ ಮಾಡಲಾಗಿದೆ.