ಇತ್ತೀಚೆಗೆ ಜನರು ಪ್ರಾಣಿಗಳನ್ನೂ ತಮ್ಮಂತೆ ಕಾಣುತ್ತಿದ್ದಾರೆ. ಅನೇಕರು ತಮ್ಮ ಸಾಕು ಪ್ರಾಣಿಗಳಾದ ನಾಯಿ ಬೆಕ್ಕುಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವುಗಳ ಹುಟ್ಟು ಹಬ್ಬವನ್ನು ಆಚರಿಸುವುದರಿಂದ ಹಿಡಿದು ಎಲ್ಲವನ್ನೂ ಮಾಡುತ್ತಿದ್ದಾರೆ.
ಇಲ್ಲೊಂದು ಕುಟುಂಬ ಬೆಕ್ಕಿಗೆ ಅದ್ಧೂರಿಯಾಗಿ ಸೀಮಂತ ಮಾಡಿದ್ದಾರೆ. ವೈರಲ್ ವಿಡಿಯೋದಲ್ಲಿ ಗರ್ಭಿಣಿ ಬೆಕ್ಕಿನ ಹಣೆಗೆ ತಿಲಕ ಇಟ್ಟು, ಹೂವಿನ ಹಾರ ಹಾಕಿ ಕುರ್ಚಿಯ ಮೇಲೆ ಕೂರಿಸಿರುವುದನ್ನು ಕಾಣಬಹುದು. ಬೆಕ್ಕಿನ ಮುಂದುಗಡೆ ಅರಶಿನ ಕುಂಕುಮ, ಬಳೆ, ಸೀರೆ, ಹಣ್ಣು ಹಂಪಲು, ತಿಂಡಿ ತಟ್ಟೆ ಇಟ್ಟು ಬೆಕ್ಕಮ್ಮನಿಗೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.