ವ್ಯಕ್ತಿಯೊಬ್ಬ ಮಹಿಳೆಯರ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ಟೆಕ್ಕಿಯೊಬ್ಬ ಬುರ್ಖಾ ಧರಿಸಿ ಶೌಚಾಲಯಕ್ಕೆ ತೆರಳಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಕೊಚ್ಚಿಯಲ್ಲಿರುವ ಲುಲುಮಾಲ್ನಲ್ಲಿ ಈ ಘಟನೆ ನಡೆದಿದೆ. ಐಟಿ ಉದ್ಯೋಗಿ ಅಭಿಮನ್ಯು(23) ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮಹಿಳೆಯರ ಶೌಚಾಯಲಕ್ಕೆ ತೆರಳಿ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ.
ಶೌಚಾಲಯದಲ್ಲಿ ಮೊಬೈಲ್ ಇಟ್ಟು ಹೊರಬಂದು ನಿಂತಿದ್ದ, ಸಿಬ್ಬಂದಿಗೆ ಅನುಮಾನ ಬಂದು ಮಾಲ್ ನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೊಚ್ಚಿ ಪೊಲೀಸರು ಅಭಿಮನ್ಯುವನ್ನು ಬಂಧಿಸಲಾಗಿದೆ.