ಬ್ಯಾಂಕಾಕ್ : ಬಾಡಿ ಬಿಲ್ಡಿಂಗ್ ವಿಷಯದಲ್ಲಿ ಹವಾ ಸೃಷ್ಟಿಸಿದ್ದ ಬಾಡಿ ಬಿಲ್ಡರ್ ಜೋ ಲಿಂಡ್ನರ್ (o Lindner) 30ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ.
ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದ ಲಿಂಡ್ನರ್ ನಿಧನ ಸಾವನ್ನಪ್ಪಿದ್ದು, ಗೆಳತಿ ನಿಚಾ ಸಾವಿನ ಸುದ್ದಿಯನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೇವಲ ಎರಡು ದಿನಗಳ ಹಿಂದೆಯಷ್ಟೇ ಜೋ ಲಿಂಡ್ನರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫಿಟ್ನೆಸ್ ಕುರಿತ ವಿಡಿಯೋ ಹಂಚಿಕೊಂಡಿದ್ದರು. ಆದರೆ, ಸಡನ್ ಆಗಿ ಸಾವನ್ನಪ್ಪಿದ್ದಕ್ಕೆ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಥಾಯ್ ಲ್ಯಾಂಡ್ ನಲ್ಲಿ ವೇಟ್ ಲಿಫ್ಟಿಂಗ್ ಹಾಗೂ ಬಾಡಿ ಬಿಲ್ಡಿಂಗ್ (Bodybuilding) ಮೂಲಕ ಲೆಜೆಂಡ್ ಎಂದೇ ಗುರುತಿಸಿಕೊಂಡಿದ್ದ ಜೋ ಲಿಂಡ್ನರ್ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಫಿಟ್ನೆಸ್ ಟಿಪ್ಸ್ ನೀಡುತ್ತಿದ್ದರು. ಲಿಂಡ್ನರ್ ಯುಟ್ಯೂಬ್ ನಲ್ಲಿ 940,000 ಚಂದಾದಾರರು ಹಾಗೂ ಇನ್ಸ್ಟಾಗ್ರಾಮ್ನಲ್ಲಿ 8.5 ದಶಲಕ್ಷ ಫಾಲೋವರ್ಸ್ಗಳನ್ನ ಹೊಂದಿದ್ದರು.








