ಕೆಲವೇ ಕ್ಷಣಗಳಲ್ಲಿ ಹೊತ್ತಿ ಉರಿದ ಚೀನಾದ ಗಗನಚುಂಬಿ ಕಟ್ಟಡ…
ಚೀನಾದ ದಕ್ಷಿಣ ಪ್ರಾಂತ್ಯವಾದ ಹುನಾನ್ನ ರಾಜಧಾನಿ ಚಾಂಗ್ಶಾ ನಗರದಲ್ಲಿ 12 ಅಂತಸ್ತಿನ ಗಗನಚುಂಬಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ಚೀನಾ ಟೆಲಿಕಾಂ ಕಟ್ಟಡವು 200 ಮೀಟರ್ (656 ಅಡಿ) ಗಿಂತ ಹೆಚ್ಚು ಉದ್ದವಾಗಿದೆ ಎಂದು ಹೇಳಲಾಗುತ್ತಿದೆ. ಘಟನೆಯ ವೇಳೆ ಆಕಾಶದಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಹರಸಾಹಸದ ನಂತರ ಬೆಂಕಿಯನ್ನ ಹತೋಟಿಗೆ ತರಲಾಗಿದೆ, ಆದರೆ ಸಾವು ನೋವುಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಹೊರಬಂದಿಲ್ಲ.
這是哪裡,朋友圈看到的,不知道地點和時間,Logo 明顯顯示中國電信標誌 pic.twitter.com/Gtc7UXKx5B
— 泰北教練🏌️🏌️⛳️⛳️ (@JOvlz0qtIe1HL4T) September 16, 2022
[🔥] Trending!
According to CCTV news, on the afternoon of September 16, a fire broke out in the China Telecom Building in the urban area of Changsha, Hunan Province. At present, the casualties are unknown & firefighters have launched fire fighting and rescue work at the scene pic.twitter.com/XA6ePvbrmV— Melon House (@Cpop_Melon) September 16, 2022
In China, the China-telecom building completely burned down in 20 minutes…
It is reported that 35 tons of fuel for servers were stored there, and the number of victims can be counted in several hundred people. pic.twitter.com/uagMjHTY1L
— Anonymous Operations (@AnonOpsSE) September 16, 2022
ಮಾಧ್ಯಮ ವರದಿಗಳ ಪ್ರಕಾರ, ಅಗ್ನಿಶಾಮಕ ದಳದ ಬೆಂಕಿಯನ್ನು ನಿಯಂತ್ರಿಸಲು ತಕ್ಷಣ ಕಾರ್ಯಪ್ರವೃತ್ತವಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆಯನ್ನ ಸಹ ಪ್ರಾರಂಭಿಸಲಾಯಿತು. “ಇಂದು ಸಂಜೆ (ಸ್ಥಳೀಯ ಕಾಲಮಾನ) 4:30 ರ ಸುಮಾರಿಗೆ ಚಾಂಗ್ಶಾ ದಲ್ಲಿರುವ ನಮ್ಮ ಕಮ್ಯೂನಿಕೇಷನ್ ಟವರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಚೀನಾ ಟೆಲಿಕಾಂ ಸಾಮಾಜಿಕ ಜಾಲತಾಣದ ಹೇಳಿಕೆಯಲ್ಲಿ ತಿಳಿಸಿದೆ. ಬೆಂಕಿಯನ್ನು ನಂದಿಸಲಾಗಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಂಪರ್ಕವೂ ಕಡಿತಗೊಂಡಿಲ್ಲ ಎಂದು ಸೇರಿಸಿದೆ.