ಕಾಲು ಜಾರಿ ಕೆರೆ ಕಟ್ಟೆಗೆ ಬಿದ್ದು ಅಸುನೀಗಿದ ಕಂದಮ್ಮಗಳು

1 min read

ಕಾಲು ಜಾರಿ ಕೆರೆ ಕಟ್ಟೆಗೆ ಬಿದ್ದು ಅಸುನೀಗಿದ ಕಂದಮ್ಮಗಳು

ತಾಯಿ, ಕೆರೆ ಕಟ್ಟೆಯ ಬಳಿ ಬಟ್ಟೆ ತೊಳೆಯುವಾಗ ಅಮ್ಮನ ಬಳಿ ಹೋದ ಎರಡು ಕಂದಮ್ಮಗಳು ಆಯತಪ್ಪಿ ನೀರಿಗೆ ಬಿದ್ದು ಅಸುನೀಗಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೋಕಿನಲ್ಲಿ ನಡೆದಿದೆ.

ಗುಬ್ಬಿ ತಾಲೂಕಿನ ಕಡಬ ಬಳಿಯ ವರಣಸಂದ್ರ ಗ್ರಾಮದ ಕವನ(7), ಯೋಕ್ಷಿತಾ(3) ಸಹೋದರಿಗಳು ಮೃತ ದುರ್ದೈವಿಗಳು.

ಗುರುವಾರ ಸಂಜೆ ಮನೆಯ ಹತ್ತಿರ ಇರುವ ಕರೆ ಕಟ್ಟೆಯ ಬಳಿ ತಾಯಿ ಮಂಜುಳ ಬಟ್ಟೆ ತೊಳೆಯಲು ಹೋಗಿದ್ದಾರೆ. ಮಕ್ಕಳು  ತಾಯಿ ಬಳಿ ತೆರಳಿ ಆಟವಾಡುವ ಸಮಯದಲ್ಲಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಕೂಡಲೆ ಮಕ್ಕಳನ್ನ ಕಾಪಾಡಲು ತಾಯಿಯು ಕೆರೆಗೆ ಹಾರಿದ್ದಾಳೆ.

ಇದನ್ನ ಗಮನಿಸಿದ ಸ್ಥಳಿಯರು ತಾಯಿಯನ್ನ ರಕ್ಷಣೆ ಮಾಡಿದ್ದಾರೆ. ಆದರೆ ಮಕ್ಕಳನ್ನ ಕಾಪಾಡವಲ್ಲಿ ಸಮಯ ಮೀರಿಹೋಗಿದೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈತರ ತ್ಯಾಗ ಅಮರ ಎಂದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್..!

ಕೃಷಿ ಕಾನೂನು ವಾಪಸ್ : ಬಿ.ಸಿ.ಪಾಟೀಲ್ ಹೇಳಿದ್ದೇನು..?

ಕರ್ನಾಟಕದ ‘ಕಾಶ್ಮೀರ’ ವಾಯ ಗುಣಮಟ್ಟದಲ್ಲಿ ನ.01 ಗದಗ 02

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd