ನವದೆಹಲಿ: ಈಗ ಭಾರತದಲ್ಲಿ ಅಯೋಧ್ಯೆ ರಾಮನ ಜಪವೇ ಆರಂಭವಾಗಿದೆ. ರಾಮನ ಮೇಲಿನ ಭಕ್ತಿ, ಪ್ರೀತಿ ಕೇವಲ ಹಿಂದೂಗಳಿಗಷ್ಟೇ ಸೀಮಿತವಾಗಿಲ್ಲ. ಮುಸ್ಲಿಂ ಮಹಿಳೆಯೊಬ್ಬರು (Muslim Women) ಸರ್ವಧರ್ಮ ಸಮನ್ವಯದಂತೆ ರಾಮಮಂದಿರಕ್ಕೆ ಪಾದಯಾತ್ರೆ ಬೆಳೆಸಿದ್ದಾರೆ.
ಶಬನಮ್ ಮುಂಬಯಿನಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ಅವರೊಂದಿಗೆ ರಮಣ್ ರಾಜ್ ಶರ್ಮಾ ಮತ್ತು ವಿನೀತ್ ಪಾಂಡೆ ಜೊತೆಯಲ್ಲಿ ಶಬನಮ್ 1,425 ಕಿಲೋಮೀಟರ್ ಕಾಲ್ನಡಿಗೆ ಮೂಲಕವೇ ಅಯೋಧ್ಯೆಗೆ ಹೊರಟಿದ್ದಾರೆ.
ಶಬನಮ್ ಮುಸ್ಲಿಂ ಧರ್ಮೀಯರಾಗಿದ್ದರೂ, ಭಗವಾನ್ ರಾಮನ ಮೇಲೆ ಸಾಕಷ್ಟು ಭಕ್ತಿ ಹೊಂದಿದ್ದಾರೆ. ರಾಮನನ್ನು ಪೂಜಿಸಲು ಕೇವಲ ಹಿಂದೂ ಅಷ್ಟೇ ಎಲ್ಲ. ಎಲ್ಲರೂ ಪೂಜಿಸಬಹುದು ಎಂಬ ಸಂದೇಶ ನೀಡಿದ್ದಾರೆ. ಈಗ ಅವರು ಪ್ರತಿ ದಿನ 25 ರಿಂದ 30 ಕಿ.ಮೀಟರ್ ಪಾದಯಾತ್ರೆ ನಡೆಸಿದ್ದಾರೆ.