ನರ್ಸ್ ಜೊತೆ ಸಂಭೋಗ ನಡೆಸುತ್ತಿದ್ದ ಸಂದರ್ಭದಲ್ಲಿಯೇ ರೋಗಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದ್ದು, ನರ್ಸ್ ನನ್ನು ಕೆಲಸದಿಂದ ವಜಾ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಯುನೈಟೆಡ್ ಕಿಂಗ್ ಡಂನ ವೇಲ್ಸ್ ನ ಆಸ್ಪತ್ರೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಕಳೆದ ಒಂದೂವರೆ ವರ್ಷದಿಂದ ಪೆನೆಲೋಪ್ ವಿಲಿಯಮ್ಸ್(42) ಎಂಬ ನರ್ಸ್ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು.
ಆಗಾಗ ರೋಗಿಯನ್ನು ಭೇಟಿಯಾಗುತ್ತಿದ್ದ ನರ್ಸ್, ಆತನೊಂದಿಗೆ ಕಲವು ಕ್ಷಣ ಕಳೆಯುತ್ತಿದ್ದಳು. ನರ್ಸ್ ಪೆನೆಲೋಪ್ ವಿಲಿಯಮ್ಸ್ ರೋಗಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಸಹೋದ್ಯೋಗಿಗಳಿಗೂ ಗೊತ್ತಿತ್ತು. ಹೀಗೆ ಮಾಡಬೇಡು ಎದು ಆಕೆಗೆ ಸಲಹೆ ನೀಡಿದ್ದರು. ಆದರೂ ಅವರು ನಿರ್ಲಕ್ಷ್ಯ ಮಾಡಿದ್ದರು ಎನ್ನಲಾಗಿದೆ.
ಇತ್ತೀಚೆಗೆ ನರ್ಸ್ ರೋಗಿಯನ್ನು ಕೆಳಕ್ಕೆ ಕರೆದಿದ್ದಾಳೆ. ಪಾರ್ಕಿಂಗ್ ಏರಿಯಾದಲ್ಲಿ ಕಾರೊಂದರಲ್ಲಿ ಇಬ್ಬುರ ದೈಹಿಕ ಸಂಪರ್ಕದಲ್ಲಿದ್ದ ವೇಳೆ ರೋಗಿ ಕುಸಿದು ಹೃದಯಸ್ತಂಭನಕ್ಕೊಳಗಾಗಿ ಸಾವನ್ನಪ್ಪಿದ್ದಾನೆ. ಆದರೆ, ನರ್ಸ್ ಆಂಬುಲೆನ್ಸ್ ಗೆ ಕರೆ ಮಾಡುವ ಬದಲು ಆಕೆಯ ಸಹೋದ್ಯೋಗಿಯನ್ನು ಕರೆದಿದ್ದಾಳೆ. ಸಿಬ್ಬಂದಿ ಸ್ಥಳಕ್ಕೆ ಬಂದಾಗ ರೋಗಿ ಭಾಗಶಃ ಬೆತ್ತಲಾಗಿ ಬಿದ್ದಿರುವ ರೋಗಿಯನ್ನು ನೋಡಿದ್ದಾರೆ. ಈ ಸಂದರ್ಭದಲ್ಲಿ ಇಡೀ ಆಸ್ಪತ್ರೆಗೆ ವಿಚಾರ ಗೊತ್ತಾಗಿದೆ.
ರೋಗಿ ಆತನ ಆರೋಗ್ಯ ಸ್ಥಿತಿಯ ಬಗ್ಗೆ ನನಗೆ ಸಂದೇಶ ಕಳುಹಿಸಿದ ಬಳಿಕ ಆತನನ್ನು ನೋಡಲು ಹೋಗಿದ್ದೆ. ನಾಲು ಸುಮಾರು ಹೊತ್ತು ಮಾತನಾಡಿದ್ದೇವೆ ಅಷ್ಟೇ ಎಂದು ಹೇಳಿದ್ದಾಳೆ. ಇದಾದ ನಂತರ ಆಕೆ ರೋಗಿಯೊಂದಿಗೆ ಸಂಬಂಧವಿರುವುದನ್ನು ಒಪ್ಪಿಕೊಂಡಿದ್ದಾಳೆ. ಸಂಭೋಗ ನಡೆಸುವ ಉದ್ದೇಶದಿಂದ ಆತನನ್ನು ಕರೆದಿದ್ದೆ. ಆತನಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಮೃತಪಟ್ಟ ಎಂದು ಹೇಳಿದ್ದಾರೆ.