ವಾಷಿಂಗ್ಟನ್: ಅಮೆರಿಕದ (America) ಡಲ್ಲಾಸ್ ನ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗುತ್ತಿದ್ದ ವಿಮಾನದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ.
ಡಲ್ಲಾಸ್ ಲವ್ ಫೀಲ್ಡ್ ಏರ್ಪೋರ್ಟ್ನಲ್ಲಿ ವಿಮಾನ ಟೇಕ್ ಆಫ್ ಆಗುತ್ತಿದ್ದ ವೇಳೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಕಾಕ್ಪಿಟ್ ಬಳಿ ಗುಂಡು ತಗುಲಿದೆ. ಆನಂತರ ವಿಮಾನ ಹಾರಾಟವನ್ನು ರದ್ದು ಮಾಡಿ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು.
ವಿಮಾನವು ಟೆಕ್ಸಾಸ್ನ ಡಲ್ಲಾಸ್ ನಿಂದ ಇಂಡಿಯಾನಾಕ್ಕೆ ತೆರಳುತ್ತಿತ್ತು. ಆದರೆ, ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ ಎನ್ನಲಾಗಿದೆ.
ದಾಳಿಯಲ್ಲಿ ವಿಮಾನದ ಬಲಭಾಗಕ್ಕೆ ಗುಂಡು ತಗುಲಿದೆ. ದಾಳಿಯ ನಂತರ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಈ ಕುರಿತು ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








