ಅಮೆರಿಕಾ: ಹೃದಯ ಸ್ತಂಭನವಾಗುತ್ತಿದ್ದ ಸುದ್ದಿಗಳು ಇತ್ತೀಚೆಗೆ ವಿಪರೀತವಾಗುತ್ತಿದ್ದು, ಯುವ ಪೀಳಿಗೆಯನ್ನು ಆತಂಕಕ್ಕೆ ದೂಡಿದೆ. ಅದರಲ್ಲಿಯೂ ಚಿಕ್ಕಮಕ್ಕಳಿಗೂ ಈ ತೊಂದರೆಗಳಾಗುತ್ತಿರುವುದು ಎಲ್ಲರ ಆತಂಕಕ್ಕೆ ಕಾರಣವಾಗುತ್ತಿದೆ. ಆಟವಾಡುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬಾತನಿಗೆ ಹೃದಯ ಸ್ತಂಭನವಾಗಿರುವ ಘಟನೆ ನಡೆದಿದೆ.
ಅಮೆರಿಕದ ಫ್ಲೋರಿಡಾದಲ್ಲಿ 14 ವರ್ಷದ ಬಾಲಕ ಶಾಲೆಯಲ್ಲಿ ನಡೆದಿದ್ದ ರೇಸ್ ನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾನೆ. ನಾಕ್ಸ್ ಮ್ಯಾಕ್ ವೆನ್ ಸಾವನ್ನಪ್ಪಿದ ಬಾಲಕ ಎಂದು ಗುರುತಿಸಲಾಗಿದೆ. ಈತ ಶಾಲೆಯಲ್ಲಿ ಆಯೋಜಿಸಲಾಗಿದ್ದ 5ಕೆ ರೇಸ್ ನಲ್ಲಿ ಭಾಗವಹಿಸಿದ್ದ ಎನ್ನಲಾಗಿದೆ. ಈ ವೇಳೆ ಓಡುತ್ತಿದ್ದಾಗ ಆತನಿಗೆ ಹೃದಯ ಸ್ತಂಭನವಾಗಿದೆ. ಕೂಡಲೇ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಆತನನ್ನು ರಕ್ಷಿಸಲು ಮುಂದಾದರೂ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಡೇವಿಸ್ ವೆಸ್ಟರ್ನ್ ಹೈಸ್ಕೂಲ್ನಲ್ಲಿ ಓದುತ್ತಿದ್ದ ಬಾಲಕ ಜೂನಿಯರ್ ರಿಸರ್ವ್ ಆಫೀಸರ್ಸ್ ಟ್ರೈನಿಂಗ್ ಕಾರ್ಪ್ಸ್ ಡ್ರಿಲ್ ಭಾಗವಹಿಸಿದಾಗ ಸಾವನ್ನಪ್ಪಿದ್ದಾನೆ.