ಇಸ್ಲಾಮಾಬಾದ್: ಪ್ರವಾಸಿಗರೊಬ್ಬರು ಮೃಗಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಹುಲಿಗೆ ಆಹಾರವಾಗಿರುವ ಘಟನೆಯೊಂದು ನಡೆದಿದೆ.
ಪಾಕಿಸ್ತಾನದ ಪಂಜಾಬ್ ನ ಪೂರ್ವ ಪ್ರಾಂತ್ಯದ ಬಹವಾಲ್ ಪುರದ ಶೇರ್‌ಬಾಗ್ ಮೃಗಾಲಯದಲ್ಲಿ ಈ ಘಟನೆ ನಡೆದಿದೆ. ಸಿಬ್ಬಂದಿಗಳು ಗಮನಿಸಿದಾಗ ಹುಲಿಯ ಬಾಯಲ್ಲಿ ಶೂ ಕಾಣಿಸಿಕೊಂಡಿದೆ. ಈ ಕುರಿತು ಪರಿಶೀಲಿಸಿದಾಗ ಹುಲಿ ಇರುವ ಆವರಣದ ಒಳಗೆ ವ್ಯಕ್ತಿಯ ಶವ ಪತ್ತೆಯಾಗಿದೆ.
ಹುಲಿಯ ಬಾಯಲ್ಲಿ ಶೂ ಕಾಣಿಸಿಕೊಳ್ಳುತ್ತಲೇ ಅನುಮಾನಗೊಂಡ ಸಿಬ್ಬಂದಿ ಗುಹೆಯೊಳಗೆ ಪರಿಶೀಲಿಸಿದಾಗ ವ್ಯಕ್ತಿಯ ಶವ ಕಂಡು ಬಂದಿದೆ. ಆಕಸ್ಮಿಕವಾಗಿ ಹುಲಿ ಇರುವ ಆವರಣದೊಳಗೆ ಬೀಳಲು ಸಾಧ್ಯವಿಲ್ಲ. ವ್ಯಕ್ತಿ ತಾನಾಗಿಯೇ ಹುಲಿಯ ಆವರಣದೊಳಗೆ ಹೋಗಿರುವ ಶಂಕೆ ವ್ಯಕ್ತಗಿರುವುದಾಗಿ ತಿಳಿದು ಬಂದಿದೆ.
ಗುಹೆಯ ಹಿಂದೆ ಮೆಟ್ಟಿಲುಗಳಿವೆ. ಬಹುಶಃ ವ್ಯಕ್ತಿ ಅಲ್ಲಿಂದ ಜಿಗಿದಿರಬಹುದು. ಆದರೆ ಆತ ಯಾರು ಹಾಗೂ ಹೇಗೆ ಬಂದ ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ವ್ಯಕ್ತಿ ಕಾಲು ಸಂಪೂರ್ಣ ಹಾಳಾಗಿದೆ. ವಿಧಿವಿಜ್ಞಾನ ತಜ್ಞರು ಮೃತದೇಹವನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.