ಮುಂಬೈ: ಮಹಿಳೆಯೊಬ್ಬರು ಪ್ರೀತಿಸಿ ಮದುವೆಯಾಗಿ, ನಂತರ ಆ ಕುಟುಂಬಕ್ಕೆ ವಿಷವುಣಿಸಿ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ಮಹಾರಾಷ್ಟ್ರದ (Maharashtra) ಅಕೋಲಾದ ಮಹಿಳೆ ಸಂಘಮಿತ್ರ ಈ ಕೃತ್ಯ ಎಸಗಿದವಳು ಎಂದು ಗುರುತಿಸಲಾಗಿದೆ. 2022 ರಲ್ಲಿ ರೋಷನ್ ಕುಂಭರೆ ಎಂಬಾತನನ್ನು ವಿವಾಹವಾಗಿದ್ದಾರೆ. ಆಕೆಯ ಪೋಷಕರು ಸಂಬಂಧ ವಿರೋಧಿಸಿದಾಗ ರೋಷನ್ ಜೊತೆ ಓಡಿಹೋಗಿ ಗಡ್ಚಿರೋಲಿಯ ಮಹಾಗಾಂವ್ನಲ್ಲಿರುವ ಅವರ ಮನೆಗೆ ತೆರಳಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅವಳು, ರೋಷನ್, ಆತನ ತಂದೆ-ತಾಯಿ ಶಂಕರ್ ಮತ್ತು ವಿಜಯ ಮತ್ತು ಅವನ ಸಹೋದರಿ ಕೋಮಲ್ ಜೊತೆ ವಾಸಿಸುತ್ತಿದ್ದರು. ಆದರೆ, ಅವಳು ಗಂಡನ ಮನೆಯಲ್ಲಿ ಕೌಟುಂಬಿಕ ಹಿಂಸೆ ಎದುರಿಸುತ್ತಿದ್ದಳು. ಕುಟುಂಬದ ಇತರ ಸದಸ್ಯರು ಕೂಡ ಮಹಿಳೆಯೊಂದಿಗೆ ಕೆಟ್ಟದಾಗಿ ನಡೆಸಿಕೊಂಡರು ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.
ಸಂಘಮಿತ್ರ ತನ್ನ ಕುಟುಂಬದೊಂದಿಗೆ ಆಚರಿಸಲು ರಕ್ಷಾ ಬಂಧನ ಹಬ್ಬದ ಸಮಯದಲ್ಲಿ ಮನೆಗೆ ಹೋಗಲು ಬಯಸಿದ್ದಳು. ಆದರೆ ರೋಷನ್ ಮತ್ತು ಅವನ ಪೋಷಕರು ಅವಳಿಗೆ ಒಪ್ಪಿಗೆ ಕೊಟ್ಟಿರಲಿಲ್ಲ. ಆಗ ಜಗಳ ನಡೆದು ರೋಷನ್ ಹಲ್ಲೆ ಮಾಡಿದ್ದ ಎನ್ನಲಾಗಿದೆ.