ಪ್ರೀತಿಯ ಬಲೆಗೆ ಬಿದ್ದವರು ಕನಸಿನ ಲೋಕದಲ್ಲಿಯೇ ವಿಹರಿಸುವುದು ಹೆಚ್ಚು. ಪ್ರೀತಿಯ ಗೆಳೆಯ ಅಥವಾ ಗೆಳತಿ ಹತ್ತಿರದಲ್ಲಿಯೇ ಇರಬೇಕು ಎಂದು ಎಲ್ಲರೂ ಭಾವಿಸಿರುತ್ತಾರೆ. ಇಲ್ಲೊಬ್ಬಳು ಪ್ರೇಮಿ, ಪ್ರತಿ ದಿನ ನೂರಕ್ಕೂ ಅಧಿಕ ಬಾರಿ ಗೆಳೆಯನಿಗೆ ಕರೆ ಮಾಡುತ್ತಿದ್ದಳು ಎಂಬ ಸುದ್ದಿ ಬಹಿರಂಗವಾಗಿದೆ.
ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. 18 ವರ್ಷದ ಯುವತಿಯೊಬ್ಬಳು ಪ್ರತಿ ದಿನ ನೂರಕ್ಕೂ ಅಧಿಕ ಬಾರಿ ಕರೆ ಮಾಡುತ್ತಿದ್ದಳು ಎನ್ನಲಾಗಿದೆ. ಯುವಕ ಕರೆಗೆ ಸ್ಪಂದಿಸದಿದ್ದರೆ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಡುತ್ತಿದ್ದಳು ಎನ್ನಲಾಗಿದೆ. ಗೆಳತಿಯ ಈ ವರ್ತನೆ ಯುವಕನಿಗೂ ಉಸಿರುಗಟ್ಟಿಸುವಂತೆ ಮಾಡಿತ್ತು.
ಪ್ರೀತಿಯಲ್ಲಿ ಬಿದ್ದ ನಂತರ ಕ್ಸಿಯಾಯು ತನ್ನ ಗೆಳೆಯನ ಮೇಲೆ ಹೆಚ್ಚು ಅವಳಂಬಿತಳಾಗಿದ್ದಾಳೆ. ಪ್ರತಿ ಕ್ಷಣವೂ ಬಾಯ್ ಫ್ರೆಂಡ್ ನನ್ನ ಜೊತೆಯಲ್ಲಿಯೇ ಇರಬೇಕು ಎಂದು ಅವಳಿಗೆ ಅನಿಸುತ್ತಿತ್ತು. ಹೀಗಾಗಿ ಹಗಲು-ರಾತ್ರಿ ಎನ್ನದೆ ಕರೆ ಮಾಡುತ್ತಿದ್ದಳು. ಪ್ರತಿ ಕ್ಷಣ ಮೆಸೇಜ್ ಮಾಡುತ್ತಿದ್ದಳು. ಅತ್ತ ಆತ ಮೆಸೆಜ್ ಅಥವಾ ಕರೆಗೆ ಸ್ಪಂದಿಸದಿದ್ದರೆ ಹುಚ್ಚಿಯಂತೆ ವರ್ತಿಸುತ್ತಿದ್ದಳು. ಹೀಗಾಗಿ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ʼಲವ್ ಬ್ರೈನ್ʼ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತಾಗಿದೆ.