AAP Minister : ಸತ್ಯೇಂದ್ರ ಜೈನ್ ಜೈಲು ರಾಜಾತಿಥ್ಯದ ಮತ್ತೊಂದು ವಿಡಿಯೋ ಬಿಡುಗಡೆ…
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಅವರಿಗೆ ರಾಜಾತಿಥ್ಯ ನೀಡುತ್ತಿರುವ ಮತ್ತೊಂದ ವೀಡಿಯೊ ಬಿಡುಗಡೆಯಾಗಿದೆ.
ಸುಮಾರು ಒಂದೂವರೆ ನಿಮಿಷದ ಈ ವಿಡಿಯೋವನ್ನು ಬಿಜೆಪಿ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಇದರಲ್ಲಿ ಸತ್ಯೇಂದ್ರ ಜೈನ್‌ಗೆ ಬ್ಯಾರಕ್‌ನೊಳಗೆ ಊಟ ಬಡಿಸಲಾಗುತ್ತಿದೆ. ಒಬ್ಬ ವ್ಯಕ್ತಿ ನಿರಂತರವಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾನೆ.
ಈ ಹಿಂದೆ ಸತ್ಯೇಂದ್ರ ಜೈನ್ ನ ಅವರ 4 ವಿಡಿಯೋಗಳು ಹೊರಬಿದ್ದಿದ್ದು, ಅದರಲ್ಲಿ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ.
ಜಾರಿ ನಿರ್ದೇಶನಾಲಯವು 31 ಮೇ 2022 ರಂದು ಮನಿ ಲಾಂಡರಿಂಗ್ ಆರೋಪದ ಮೇಲೆ ಜೈನ್ ಅವರನ್ನು ಬಂಧಿಸಿತು. ಅಂದಿನಿಂದ ಜೈನ್‌ನನ್ನು ತಿಹಾರ್‌ನಲ್ಲಿ ಇರಿಸಲಾಗಿದೆ. ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರೂ 5 ತಿಂಗಳಿಂದ ಒಮ್ಮೆಯೂ ಜಾಮೀನು ಸಿಕ್ಕಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಮಂಗಳವಾರ ನ್ಯಾಯಾಲಯಕ್ಕೆ ಹಾಜರಾದಾಗ, ಸತ್ಯೇಂದ್ರ ಜೈನ್ ಅವರ ವಕೀಲರು ನ್ಯಾಯಾಲಯಕ್ಕೆ ಆಹಾರ ಮತ್ತು ಚಿಕಿತ್ಸೆಯನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಹೇಳಿದ್ದಾರೆ. ಜೈಲಿನಲ್ಲಿ ಜೈನ್ ಅವರ ತೂಕ 28 ಕೆಜಿ ಕಡಿಮೆಯಾಗಿದೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸತ್ಯೇಂದ್ರ ಜೈನ್ ಪರವಾಗಿ ಮಾತನಾಡಿದ್ದಾರೆ. ಜೈನ್ ಅಸ್ವಸ್ಥರಾಗಿದ್ದು, ವೈದ್ಯರ ಸಲಹೆ ಮೇರೆಗೆ ಫಿಸಿಯೋಥೆರಪಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ತಿಹಾರ್‌ನ ವಿಡಿಯೊಗಳು ಸೋರಿಕೆಯಾಗಿ ಬಿಜೆಪಿಗೆ ಹೇಗೆ ತಲುಪಿದವು ಎಂಬ ಪ್ರಶ್ನೆಯನ್ನ ಅವರು ಎತ್ತಿದರು. ಅಲ್ಲದೆ, ಜೈನ್ ಅವರ ಅನಾರೋಗ್ಯದ ಬಗ್ಗೆ ಗೇಲಿ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಅವನು ಅತ್ಯಾಚಾರಿ, ಫಿಸಿಯೋಥೆರಪಿಸ್ಟ್ ಅಲ್ಲ
ಸತ್ಯೇಂದ್ರ ಜೈನ್ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ವ್ಯಕ್ತಿ ಅತ್ಯಾಚಾರ ಪ್ರಕರಣದ ಆರೋಪಿ. ಜೈನ್‌ಗೆ ಮಸಾಜ್ ಮಾಡಿದ ವ್ಯಕ್ತಿಯನ್ನು ಪೋಕ್ಸೊ ಕಾಯ್ದೆಯಡಿಯಲ್ಲಿ ದಾಖಲಿಸಲಾಗಿದೆ ಎಂದು ತಿಹಾರ್‌ನ ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಒಂದು ವರ್ಷದ ಹಿಂದೆ ಅವರನ್ನು ಬಂಧಿಸಲಾಗಿತ್ತು.
AAP Minister: Satyendra Jain released another video of Jail Rajathithya…