ಕಲಬುರಗಿ : ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲಬುರ್ಗಿಯ ಅಫಜಲಪೂರ ಹೊರ ವಲಯದಿಂದ 6 ಕಿ.ಮಿ.ದೂರದಲ್ಲಿ ನಡೆದಿದೆ..
ಅಫಜಲಪೂರ ಕಡೆಯಿಂದ ಮಹಾರಾಷ್ಟ್ರ ಕಡೆ ಹೊರಟಿದ್ದ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ಡ್ರೈವರ್ ಹಾಗೂ ನಾಲ್ಕು ಜನ ಮಹಿಳೆಯರು ಸಾವನಪ್ಪಿದ್ದಾರೆ.
ಚಾಲಕನ ನಿದ್ರೆ ಮಂಪರುನಿಂದ ಅನಾಹುತ ಸಂಭವಿಸಿದೆ ಎನ್ನಲಾಗಿದೆ.. ಅಫಜಲಪೂರ ತಾ.ದೇವಲಗಾಣಗಾಪುರದ ದತ್ತಾತ್ರೇಯನ ದರ್ಶನ ಮಾಡಿಕೊಂಡು ವಾಪಸ್ ಹೋಗುವಾಗ ಘಟನೆ ನಡೆದಿದೆ.
ಘಟನೆಯಲ್ಲಿ ಇಬ್ಬರು ಹುಡುಗರು ಎರಡು ವರ್ಷದ ಹುಡುಗನಿಗೆ ಗಂಭೀರ ಗಾಯವಾಗಿದ್ದು , ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕಕೊಡಡಿಸಲಾಗ್ತಿದೆ.. ಸ್ಥಳಕ್ಕೆ ಅಫಜಲಪೂರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಫಜಲಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..