ಸಿಡ್ನಿ: ವ್ಯಕ್ತಿಯೊಬ್ಬ ಗರ್ಲ್ ಫ್ರೆಂಡ್ ಸಿಗಲಿಲ್ಲ ಎಂಬ ಕಾರಣಕ್ಕೆ 5 ಜನ ಮಹಿಳೆಯರನ್ನು ಕೊಲೆ ಮಾಡಿ ಹಲವರನ್ನು ಗಾಯಗೊಳಿಸಿರುವ ಘಟನೆ ನಡೆದಿದೆ.
40 ವರ್ಷದ ಜೋಯಲ್ ಕೌಚಿ ಎಂಬ ವ್ಯಕ್ತಿಯೇ ಈ ಹಂತಕ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಶಾಪಿಂಗ್ ಮಾಲ್ ನಲ್ಲಿ ಐವರು ಮಹಿಳೆಯರು ಸೇರಿದಂತೆ 6 ಜನರನ್ನು ಈತ ಬಲಿ ಪಡೆದಿದ್ದಾನೆ. ವೆಸ್ಟ್ ಫೀಲ್ಡ್ ಬಾಂಡಿ ಜಂಕ್ಷನ್ ಮಾಲ್ನಲ್ಲಿಯೇ ಈತನನ್ನು ಪೊಲೀಸರು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
ಈತ 6 ಜನರನ್ನು ಕೊಲೆ ಮಾಡಿದ್ದಲ್ಲದೇ, 12 ಜನರನ್ನು ಗಾಯಗೊಳಿಸಿದ್ದ. ಸತ್ತವರ ಪೈಕಿ ಐವರು ಮಹಿಳೆಯರು ಹಾಗೂ ಗಾಯಗೊಂಡವರೆಲ್ಲ ಮಹಿಳೆಯರೇ ಆಗಿದ್ದಾರೆ. ಸಿಸಿಟಿವಿ ಫೂಟೇಜ್ ನಲ್ಲಿ ಈತ ಮಹಿಳೆಯರು ಕಾಣುತ್ತಿದ್ದಂತೆ ಹಲ್ಲೆ ಮಾಡಿರುವುದು ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಗನಿಗೆ ಗರ್ಲ್ ಫ್ರೆಂಡ್ ಸಿಕ್ಕಿರಲಿಲ್ಲ. ಹೀಗಾಗಿ ಆತ ಹತಾಶೆಯಲ್ಲಿದ್ದ. ಶಿಜೋಫ್ರೆನಿಯಾ ರೋಗದಿಂದ ಬಳಲುತ್ತಿದ್ದ. ಹೀಗಾಗಿ ಹುಚ್ಚನಂತಾಗಿದ್ದ. ನಿಮಗೆ ಆತ ಹುಚ್ಚ ಅನಿಸಬಹುದು. ನನಗೆ ಆತ ಕಾಯಿಲೆಯಿಂದ ಬಳಲುತ್ತಿದ್ದ ರೋಗಿ ಎಂದು ಕೊಲೆಗಡುಕನ ತಂದೆ ಆಂಡ್ರ್ಯೂ ಕೌಚಿ ಹೇಳಿದ್ದಾರೆ.