ಶೂಟಿಂಗ್ ಸಂದರ್ಭದಲ್ಲಿ ನಟ ಅಜಿತ್ ಕುಮಾರ್ ಕಾರು ಅಪಘಾತವಾಗಿದೆ.
ನಟ ಅಜಿತ್ ಕುಮಾರ್ ಹಲವಾರು ಸಿನಿಮಾಗಳಲ್ಲಿ ಡ್ಯೂಪ್ ಬಳಸದೆ ಸ್ಟಂಟ್ ಮಾಡಿ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಸದ್ಯ ಸಿನಿಮಾ ಶೂಟಿಂಗ್ ನಲ್ಲಿ ಆಕ್ಷನ್ ದೃಶ್ಯಗಳ ಶೂಟಿಂಗ್ ವೇಳೆ ಕಾರು ಅಪಘಾತವಾಗಿತ್ತು. ಆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಜಿತ್ ಕುಮಾರ್ ಶೂಟಿಂಗ್ ವೇಳೆ ಹೇಗೆ ಆಕ್ಸಿಡೆಂಟ್ ಆಯ್ತು ಎಂಬುದನ್ನು ವಿಡಿಯೋ ಮೂಲಕ ಅಜಿತ್ ಮ್ಯಾನೇಜರ್ ಸುರೇಶ್ ಚಂದ್ರ ರಿವೀಲ್ ಮಾಡಿದ್ದಾರೆ. ಅಜಿತ್ ಮತ್ತು ಸಹನಟ ಆರವ್, ಕಾರು ಚೇಸ್ ದೃಶ್ಯಕ್ಕಾಗಿ ‘ವಿದಾಮುಯಾರ್ಚಿ’ ಚಿತ್ರಕ್ಕೆ ಶೂಟಿಂಗ್ ಮಾಡುವಾಗ ಈ ಅವಘಡ ಸಂಭವಿಸಿದೆ. ಮುಂದೆ ಆಗಬೇಕಾಗಿದ್ದ ಅನಾಹುತವನ್ನು ನಟ ತಪ್ಪಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ‘ವಿದಾಮುಯಾರ್ಚಿ’ ಚಿತ್ರದಲ್ಲಿ ಅಜಿತ್ ಕುಮಾರ್, ತ್ರಿಷಾ, ರೆಜಿನಾ, ಅರ್ಜುನ್ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.