ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಹೊಸದೊಂದು ಬಿಸಿನೆಸ್ ಗೆ ಕೈಹಾಕಿದ್ದಾರೆ.
ವಿಜಯಲಕ್ಷ್ಮಿ ಪ್ರಾರಂಭಿಸಿರುವ ಈ ನವೋದ್ಯಮ ಗ್ರಾಹಕರಿಗೆ ಗುಣಮಟ್ಟದ ಸರಕು ನೀಡುವ ಜೊತೆಗೆ, ರೈತರಿಗೆ ಸಹ ದುಡಿಮೆಯ ಫಲ ನೀಡುವ ಉತ್ತಮ ಆಲೋಚನೆ ಹೊಂದಿದೆ.
ಹೌದು ತಮ್ಮ ಹೊಸ ವ್ಯಾಪಾರದ ಬಗ್ಗೆ ವಿಜಯಲಕ್ಷ್ಮೀ ಅವರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇ-ಕಾಮರ್ಸ್ ನಲ್ಲಿ ಇದು ನನ್ನ ಮೊದಲ ಹೆಜ್ಜೆ ಎಂದು ಬರೆದುಕೊಂಡಿದ್ದಾರೆ.
‘ಮೈ ಫ್ರೆಶ್ ಬಾಸ್ಕೆಟ್ ಇನ್’ ಹೆಸರಿನಲ್ಲಿ ಇ- ಬಿಸಿನೆಸ್ ಶುರು ಮಾಡಿರುವ ವಿಜಯಲಕ್ಷ್ಮೀ ಅವರು
ತರಕಾರಿ ಹಾಗೂ ಹಾಲನ್ನು ನೇರವಾಗಿ ರೈತನಿಂದ ಪಡೆದು ಗ್ರಾಹಕರ ಮನೆಗೆ ತಾಜಾ ಆಗಿ ತಲುಪಿಸುವ ವ್ಯಾಪಾರವನ್ನು ಪ್ರಾರಂಭಿಸಿ ಸಾರ್ವಜನಿಕರು, ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಯೋಜನೆಯ ಮೂಲಕ ಮಧ್ಯವರ್ತಿಗಳ ಹಾವಳಿಯಿಂದ ಬೆಳೆದ ಬೆಳೆಗೆ ಸೂಕ್ತ ಫಲ ಸಿಗದೆ ಒದ್ದಾಡುತ್ತಿರುವ ರೈತರಿಗೆ ಸಹಾಯವಾಗಲಿದೆ. ಈ ವ್ಯಪಾರ ಸಂಸ್ಥೆಯು ನೇರವಾಗಿ ರೈತರಿಂದ ತರಕಾರಿ ಖರೀದಿಸಿ ಅದನ್ನು ಗ್ರಾಹಕರಿಗೆ ತಲುಪಿಸಲಿದೆ. ಹೀಗಾಗಿ ಗ್ರಾಹಕರು ನೀಡಿದ ಹಣ ನೇರವಾಗಿ ರೈತರಿಗೆ ತಲುಪಲಿದೆ.
ಇನ್ನೂ ದರ್ಶನ್ ಅವರು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಅವರ ಪತ್ನಿ ಸಹ ಇದೇ ಹಾದಿಯಲ್ಲಿ ಸಾಗಿರುವುದು ದರ್ಶನ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.









