ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ನಟ ರಾಮ್ ಚರಣ್ ಕುಟುಂಬ ಸಮೇತರಾಗಿ ತಿರುಪತಿ ವೆಂಕಟೇಶ್ವರನ ದರ್ಶನ ಮಾಡಿದ್ದಾರೆ. ಸದ್ಯ ಅವರು ತಿಮ್ಮಪ್ಪನ ದರ್ಶನ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ರಾಮ್ ಚರಣ್ ಅವರು ಪ್ರತಿ ವರ್ಷ ಹುಟ್ಟು ಹಬ್ಬದ ದಿನದಂದು ತಿರುಪತಿಗೆ ಭೇಟಿ ನೀಡುತ್ತಾರೆ. ಈ ವರ್ಷವೂ ಸಂಪ್ರದಾಯ ಮುಂದುವರಿಸಿದ್ದಾರೆ. ಈ ವೇಳೆ ಕುಟುಂಬಸ್ಥರು ವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಮ್ ಚರಣ್ ಅವರ ಜೊತೆ ಪತ್ನಿ ಉಪಾಸನಾ ಕೂಡ ಆಗಮಿಸಿದ್ದರು. ರಾಮ್ ಚರಣ್ ಆಗಮಿಸುತ್ತಾರೆ ಎಂಬ ಕಾರಣಕ್ಕೆ ಹೆಚ್ಚಿನ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ತಮ್ಮ ನೆಚ್ಚಿನ ನಟನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.
ರಾಮ್ ಚರಣ್ ಅವರು ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈಗಷ್ಟೇ ಬುಚ್ಚಿಬಾಬು ಜೊತೆಗಿನ ಸಿನಿಮಾದ ಪೂಜೆ ನಡೆದಿದೆ.