ಖ್ಯಾತ ನಟಿ ಚಿತ್ರಾ ವಿಧಿವಶ Chitra saaksha tv
ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟಿ ಚಿತ್ರಾ ಇಂದು ವಿಧಿವಶರಾಗಿದ್ದಾರೆ. ಚೆನ್ನೈನ ಆಸ್ಪತ್ರೆಯಲ್ಲಿ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
1965 ರಲ್ಲಿ ಕೇರಳದ ಕೊಚ್ಚಿಯಲ್ಲಿ ಜನಸಿದ್ದ ಚಿತ್ರಾ ಅವರು, 1983 ರಲ್ಲಿ ಅಟ್ಟಕಲಾಶಂ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದ್ದರು.
ನಂತರ ಕಾಲಿಕ್ಕಾಲಂ (1990), ದೇವಸುರಾಮ್ (1993), ಮತ್ತು ಪತಮುದಯಂ (1985) ಸಿನಿಮಾಗಳಲ್ಲಿ ನಟಿಸಿದ್ದರು.
ದಕ್ಷಿಣ ಭಾರತದ ಎಲ್ಲ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದ ಚಿತ್ರಾ ನಂತರ ಹಿಂದಿ ಚಿತ್ರಗಳಲ್ಲೂ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕನಟಿಯಾಗಿ ಮಿಂಚಿದ್ದಾರೆ.
ಇನ್ನು ಚಿತ್ರಾ ಅವರು ಕನ್ನಡದ ಸುಂದರ ಸ್ವಪ್ನಗಳು, ಕೃಷ್ಣ ಮೆಚ್ಚಿದ ರಾಧೆ, ಅಜಯ್ ವಿಜಯ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.









