Adani-Ambani : ಅಂಬಾನಿ ಅದಾನಿ ಸಂಪತ್ತಿನಲ್ಲಿ ಬಾರಿ ಕುಸಿತ, ಕಾರಣ ಗೊತ್ತಾ…
ದೇಶದ ಶ್ರೀಮಂತ ವ್ಯಕ್ತಿಗಳಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಅವರ ಸಂಪತ್ತು ಕಳೆದ ವಾರ ಭಾರಿ ಕುಸಿತ ಕಂಡಿದೆ. ಇದಕ್ಕೆಲ್ಲಾ ಕಾರಣ ಷೇರು ಮಾರುಕಟ್ಟೆ. ಕಳೆದ ವಾರ ದೇಶಿಯ ಶೇರು ಮಾರುಕಟ್ಟೆಗಳು ಭಾರೀ ಕುಸಿತ ಕಂಡಿದ್ದು ಗೊತ್ತೇ ಇದೆ.
ಈ ತಿಂಗಳ 19 ರಿಂದ 23 ರವರೆಗೆ ಷೇರು ಮಾರುಕಟ್ಟೆಗಳು ಭಾರಿ ಕುಸಿತ ಕಂಡಿವೆ. ಶುಕ್ರವಾರ ಷೇರು ಮಾರುಕಟ್ಟೆಯಲ್ಲಿ ಸುಮಾರು ರೂ.8.40 ಲಕ್ಷ ಹೂಡಿಕೆ ಕಡಿಮೆಯಾಗಿದೆ. ಗುರುವಾರದಂದು ಬಿಎಸ್ ಇ ಷೇರು ಮಾರುಕಟ್ಟೆಯಲ್ಲಿ ಲಿಸ್ಟೆಡ್ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ರೂ.280.53 ಲಕ್ಷ ಕೋಟಿಯಷ್ಟಿತ್ತು, ಆದರೆ ಶುಕ್ರವಾರದ ನಷ್ಟದೊಂದಿಗೆ ಈ ಮೌಲ್ಯ ರೂ.272.12 ಲಕ್ಷ ಕೋಟಿಗೆ ಕುಸಿದಿದೆ. ಶುಕ್ರವಾರದಂದು ಬಿಎಸ್ಇ ಸೆನ್ಸೆಕ್ಸ್ 980 ಅಂಕ ಕುಸಿದು 59,845ಕ್ಕೆ ಕೊನೆಗೊಂಡಿತು. ಎನ್ಎಸ್ಇ ನಿಫ್ಟಿ 320 ಅಂಕ ಕಳೆದುಕೊಂಡು 17,806ಕ್ಕೆ ತಲುಪಿದೆ. ಮಾರುಕಟ್ಟೆಗಳು ನಷ್ಟವನ್ನು ಅನುಭವಿಸಿದ ಕಾರಣ ಅದಾನಿ ಮತ್ತು ಅಂಬಾನಿಯ ಸಂಪತ್ತು ಕೂಡ ಕಡಿಮೆಯಾಯಿತು.
ಈ ಹಿಂದೆ ಬ್ಲೂಮ್ಬರ್ಗ್ ಕಂಪನಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಅದಾನಿ ಈ ವರ್ಷ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಇತ್ತೀಚಿನ ಕುಸಿತದ ಹಿನ್ನೆಲೆಯಲ್ಲಿ, ಅವರು ಮೂರನೇ ಸ್ಥಾನಕ್ಕೆ ಮರಳಿದರು. ಈ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದಿರುವ ಮುಖೇಶ್ ಅಂಬಾನಿ ಅವರ ಸಂಪತ್ತು ಕೂಡ ಭಾರೀ ಕುಸಿತ ಕಂಡಿದೆ.
Adani-Ambani: Ambani Adani’s wealth has fallen several times, the reason is known…