ಸಹಾಯ ಮಾಡಿದ ಪಾಕಿಸ್ತಾನದಲ್ಲೇ ದಾಳಿ ತೀವ್ರಗೊಳಿಸಿದ ತಾಲಿಬಾನ್..!
ಸ್ಮಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ.. ಇನ್ನೂ ಅಫ್ಗಾನ್ ವಶಪಡಿಸಿಕೊಳ್ಳುವದಕ್ಕೆ ಬೆಂಬಲ ನೀಡಿರುವುದು ಉಗ್ರರ ಪೋಷಕ ಪಾಕಿಸ್ತಾನ ಎನ್ನುವ ವಿಚಾರ ಗೊತ್ತಿರುವುದೇ. ಕಾಶ್ಮೀರ ಪಡೆಯುವ ತಿರುಕನ ಕನಸು ಕಾಣ್ತಿರುವ ಪಾಕಿಸ್ತಾನ ತಾಲಿಬಾನಿಗಳ ಸಪೋರ್ಟ್ ಪಡೆಯೋದಕ್ಕೆ ಸಂಚು ರೂಪಿಸಿದೆ ಎನ್ನಲಾಗಿದೆ.
ಪಂಜಶೀರ್ ಮೇಲೆ ಡ್ರೋನ್ ದಾಳಿ ನಡೆಸಿದ ಪಾಕಿಸ್ತಾನದ ವಿರುದ್ಧ ಕಾಬುಲ್ ನಲ್ಲಿ ಪ್ರತಿಭಟನೆ
ಇದೀಗ ತಾಲಿಬಾನಿಗಳು ಅಫ್ಗಾನ್ ನಲ್ಲಿ ಸರ್ಕಾರ ರಚನೆಯ ಪ್ಲಾನ್ ನಲ್ಲಿದ್ದಾರೆ. ಅಷ್ಟೇ ಅಲ್ಲ ಸರ್ಕಾರ ಸಮಾರಂಭಕ್ಕೆ ಪಾಕಿಸ್ತಾನ , ಚೈನಾವನ್ನೂ ಆಹ್ವಾನಿಸಿದ್ದಾರೆ ತಾಲಿಬಾನ್ ಉಗ್ರರು. ಇದೀಗ ಪಾಕಿಸ್ತಾನದಲ್ಲಿಯೇ ಏಕಾಏಕಿ ಭಯೋತ್ಪಾದಕ ದಾಳಿಗಳು ಹೆಚ್ಚಳವಾಗಿದ್ದು, ಇದನ್ನು ತಾಲಿಬಾನ್ ನ ಪಾಕಿಸ್ತಾನದ ಬಣವಾದ ತೆಹ್ರೀಕ್ ಇ-ತಾಲಿಬಾನ್ ನಡೆಸಿರುವುದಾಗಿ ಹೇಳಿಕೊಂಡಿದೆ. ಹೌದು ಇತ್ತೀಚೆಗೆ ನೈರುತ್ಯ ಪಾಕಿಸ್ತಾನದ ಭದ್ರತಾ ತಪಾಸಣಾ ಶಿಬಿರದ ಬಳಿ ಆತ್ಮಾಹುತಿ ದಾಳಿಕೋರನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. ಈ ದಾಳಿಯಲ್ಲಿ ಕನಿಷ್ಠ ಮೂವರು ಅರೆಸೇನಾ ಸಿಬ್ಬಂದಿ ಮೃತಪಟ್ಟಿದ್ದರೆ, 15 ಜನ ತೀವ್ರವಾಗಿ ಗಾಯಗೊಂಡರು.
ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾ–ಮಸ್ತುಂಗ್ ರಸ್ತೆಯಲ್ಲಿದ್ದ ಅರೆಸೈನಿಕ ಪಡೆಯ ಚೆಕ್‌ಪೋಸ್ಟ್‌ಗೆ ನುಗ್ಗಿದ್ದ ಆತ್ಮಾಹುತಿ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ ಎಂದು ವರದಿಗಳಾಗಿವೆ. ಇನ್ನೂ ತೆಹ್ರೀಕ್ ಇ-ತಾಲಿಬಾನ್ ಅನ್ನು ತೆಹ್ರೀಕ್ ಇ-ತಾಲಿಬಾನ್ ಎಂದೇ ಉಲ್ಲೇಖಿಸಲು ಎಚ್ಚರಿಕೆ ನೀಡಲಾಗಿದೆ. ಅನವರ್ಥ ಶೀರ್ಷಿಕೆಗಳನ್ನು ಕೊಟ್ಟವರು ನಮ್ಮ ಶತ್ರುಗಳು ಟಿಟಿಪಿ ಪಾಕ್ ಮಾಧ್ಯಮಗಳಿಗೆ ಎಚ್ಚರಿಸಿವೆ. ಇನ್ನೂ ನಮ್ಮ ಭಾವನೆಗಳನ್ನು ಗೌರವಿಸದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದೂ ಟಿಟಿಪಿ ಎಚ್ಚರಿಸಿದೆ. ಅಲ್ಲದೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ ತಾಲಿಬಾನ್ ಬಣ ಸಲಹೆ ನೀಡಿದ್ದು, ಅಮೆರಿಕವು ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಜೊತೆಗೆ ಮಾಡಿಕೊಂಡ ಶಾಂತಿ ಒಪ್ಪಂದದಂತೆಯೇ ಪಾಕಿಸ್ತಾನದ ಸರ್ಕಾರವೂ ಒಪ್ಪಂದ ಮಾಡಿಕೊಂಡ್ರೆ ಉತ್ತಮ ಎಂದಿದೆ.