ಪ್ರಧಾನಿ ಮೋದಿ ಅವರು ಇತ್ತೀಚೆಗಷ್ಟೇ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಇದರ ಬೆನ್ನಲ್ಲಿಯೇ ಭಾರತದಿಂದ ಕಳ್ಳಸಾಗಾಣಿಕೆ ಮಾಡಲಾಗಿದ್ದ 105 ಸಾಂಸ್ಕೃತಿಕ ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಲಿದೆ ಮತ್ತು ಇದಕ್ಕಾಗಿ ವಾಪಸಾತಿ ಸಮಾರಂಭವನ್ನು ನಡೆದಿರುವ ಬಗ್ಗೆ ನ್ಯೂಯಾರ್ಕ್ (Newyork) ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಹೇಳಿದ್ದಾರೆ.
USನ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರು US ತಂಡಕ್ಕೆ, ವಿಶೇಷವಾಗಿ ಮ್ಯಾನ್ಹಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್ ಮತ್ತು ಅವರ ಕಳ್ಳಸಾಗಣೆ ವಿರೋಧಿ ಘಟಕ ಮತ್ತು ಹೋಮ್ಲ್ಯಾಂಡ್ ಸೆಕ್ಯುರಿಟಿ ತನಿಖಾ ತಂಡಕ್ಕೆ ತಮ್ಮ ಸಹಕಾರ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಇವು ಕೇವಲ ಕಲಾಕೃತಿಗಳಲ್ಲ, ಆದರೆ ಅವರ ಜೀವನ ಪರಂಪರೆ ಮತ್ತು ಸಂಸ್ಕೃತಿಯ ಭಾಗವಾಗಿದೆ ಎಂದು ತರಂಜಿತ್ ಹೇಳಿದರು. ಈ ಪುರಾತನ ವಸ್ತುಗಳನ್ನು ಶೀಘ್ರದಲ್ಲೇ ಭಾರತಕ್ಕೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ. 105 ಪುರಾತನ ವಸ್ತುಗಳಲ್ಲಿ, ದಕ್ಷಿಣ ಭಾರತದಿಂದ 47, ಮಧ್ಯ ಭಾರತದಿಂದ 27, ಉತ್ತರ ಭಾರತದಿಂದ 6 ಮತ್ತು ಪಶ್ಚಿಮ ಭಾರತದಿಂದ 3 ಕಲಾಕೃತಿಗಳು ಸೇರಿವೆ.