Amitabh Bachchan : ಪ್ರಾಜೆಕ್ಟ್ ಕೆ ಚಿತ್ರೀಕರಣದ ವೇಳೆ ಗಾಯಗೊಂಡ ಬಿಗ್ ಬಿ….
ಅಮಿತಾಬ್ ಬಚ್ಚನ್ ಮತ್ತು ಪ್ರಭಾಸ್ ಒಟ್ಟಿಗೆ ನಟಿಸುತ್ತಿರುವ ಪ್ಯಾನ್ ಇಂಡಿಯಾ ಮೂವಿ ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣ ಪ್ರಸ್ತುತ ಹೈದ್ರಾಬಾದ್ ನಲ್ಲಿ ನಡೆಯುತ್ತಿದೆ. ಅಂತಿಮ ಹಂತದ ಆಕ್ಷನ್ ದೃಶ್ಯಗಳನ್ನ ಚಿತ್ರೀಕರಿಸುವ ವೇಳೆ ನಟ ಅಮಿತಾಬ್ ಬಚ್ಚನ್ ಗಾಯಗೊಂಡಿದ್ದಾರೆ.
ಅಮಿತಾಬ್ ಅವರನ್ನ ತಕ್ಷಣ ಗಾಚಿಬೌಲಿಯ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಕ್ಕೆಲುಬು ಸ್ನಾಯು ಗಾಯಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆಯ ನಂತರ ಅಮಿತಾಬ್ ಬಚ್ಚನ್ ಮುಂಬೈ ನಿವಾಸಕ್ಕೆ ತೆರಳಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಕೆಲವು ವಾರಗಳವರೆಗೆ ಸಂಪೂರ್ಣ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ನಾಗಶ್ವಿನ್ ನಿರ್ದೇಶನದ ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣ ಸಧ್ಯಕ್ಕೆ ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಈ ಚಿತ್ರಕ್ಕೆ ನಾಯಕಿಯಾಗಿ ನಟಿಸುತ್ತಿದ್ದಾರೆ. ನಿರ್ಮಾಪಕ ಅಶ್ವಿನಿ ದತ್ 500 ಕೋಟಿ ರೂ ಬಜೆಟ್ ನೊಂದಿಗೆ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮುಂದಿನ ವರ್ಷ ಜನವರಿ 12 ರಂದು ಚಿತ್ರ ಸಂಕ್ರಾಂತಿ ಹಬ್ಬಕ್ಕೆ ತೆರೆಕಾಣಲಿದೆ.
Amitabh Bachchan : Big B injured while shooting for Project K….