ತಿರುವನಂತಪುರಂ: ಆನೆಯೊಂದು ಮಾವುತನನ್ನು ತುಳಿದು ಕೊಂದ ಘಟನೆಯೊಂದು ನಡೆದಿದೆ.
ಈ ಘಟನೆ ಕೇರಳದ ವೈಕೋಮ್ ನಲ್ಲಿ ನಡೆದಿದೆ. ಅರವಿಂದ್ (26) ಸಾವನ್ನಪ್ಪಿದ ಮಾವುತ. ಪುತ್ತುಪ್ಪಲ್ಲಿ ಮೂಲದ ನಿವಾಸಿಯಾಗಿರುವ ಮಾವುತ. ಅರವಿಂದ್ ಅವರು ಕುಂಜುಲಕ್ಷ್ಮಿಯ ಎರಡನೇ ಮಾವುತರಾಗಿ ಕಳೆದ ತಿಂಗಳಿನಿಂದ ಸೇವೆ ಆರಂಭಿಸಿದ್ದರು. ಅರವಿಂದ್ ಅವರು ಟಿವಿ ಪುರಂ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿನ ಕಾರ್ಯಕ್ರಮಕ್ಕೆ ಆನೆ ಕರೆದುಕೊಂಡು ಹೋಗಿದ್ದ ವೇಳೆ ಅದು ದೇವಸ್ಥಾನದಲ್ಲಿಯೇ ಮಾವುತನ ಮೇಲೆ ದಾಳಿ ನಡೆಸಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕುಂಜುಲಕ್ಷ್ಮಿ ಎಂಬ ಹೆಸರಿನಿಂದ ಕರೆಯುವ ಆನೆಯು ಏಕಾಏಕಿ ಮಾವುತನ ಮೇಲೆ ದಾಳಿ ನಡೆಸಿದೆ. ದೇವಸ್ಥಾನದಲ್ಲಿದ್ದ ಸ್ಥಳೀಯರು ಸೇರಿ ಅರವಿಂದ್ ನನ್ನು ರಕ್ಷಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.