ನವದೆಹಲಿ : ಇಸ್ರೇಲ್ ನಲ್ಲಿ ಉಗ್ರರ ಉಟ್ಟಹಾಸ ಮುಂದುವರೆದಿದೆ. ಹಮಾಸ್ ಉಗ್ರರು (Hamas Terrorist) ಯುವತಿಯನ್ನು ಅಪಹರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವತಿ ನನ್ನನ್ನು ಕೊಲ್ಲಬೇಡಿ ಎಂದು ಅಳುತ್ತಾ ಕೂಗುತ್ತಿರುವ ದೃಶ್ಯ ಮನಕಲಕುವಂತಿದೆ. ಹೆನ್ಸ್ ಮಜೀಗ್ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹಮಾಸ್ ಉಗ್ರರು ಯುವತಿಯನ್ನು ಅಪಹರಿಸಿ ಬೈಕ್ ನ ಮಧ್ಯದಲ್ಲಿ ಕೂರಿಸಿಕೊಂಡು ಹೋಗಲು ಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಯುವತಿ ನನ್ನನ್ನು ಕೊಲೆ ಮಾಡಬೇಡಿ.
ನನ್ನನ್ನು ಕಾಪಾಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುವ ದೃಶ್ಯವನ್ನು ಕೂಡ ಅದರಲ್ಲಿದೆ. ಇಸ್ರೇಲ್ ನಲ್ಲಿ ಫೀಸ್ ಮ್ಯೂಸಿಕ್ ಹಬ್ಬ ನಡೆಯುತ್ತಿತ್ತು. ಇದರಲ್ಲಿ ಯುವತಿ ನೋವಾ ಕೂಡ ಭಾಗಿಯಾಗಿದ್ದರು. ಈ ವೇಳೆ ಉಗ್ರರು ಕಿಡ್ನಾಪ್ ಮಾಡಿ ಗಾಜಾಕ್ಕೆ ಎಳೆದುಕೊಂಡು ಹೋಗಿ, ಒತ್ತೆಯಾಳಾಗಿರಿಸಿಕೊಂಡಿದ್ದಾರೆ ಎನ್ನಲಾಗಿದೆ.