ಆನ್ಲೈನ್ ಸ್ಟೋರ್ ಅನ್ನು ಆರಂಭಿಸಿದ ಆ್ಯಪಲ್
ಹೊಸದಿಲ್ಲಿ, ಸೆಪ್ಟೆಂಬರ್24: ಸ್ಮಾರ್ಟ್ಫೋನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಆ್ಯಪಲ್, ದೇಶದಲ್ಲಿ ಮಂಗಳವಾರ ಆನ್ಲೈನ್ ಸ್ಟೋರ್ ಅನ್ನು ಆರಂಭಿಸಿದೆ. ಇದು ಗ್ರಾಹಕರಿಗೆ ಸಂಪೂರ್ಣ ಶ್ರೇಣಿಯ ಉತ್ಪನ್ನಗಳು, ಬೆಂಬಲ ಮತ್ತು ಪ್ರೀಮಿಯಂ ಅನುಭವವನ್ನು ನೀಡುವ ಜೊತೆಗೆ ಹಳೆಯ ಫೋನ್ ಎಕ್ಸ್ಜೇಂಜ್ ಮಾಡಿ ಹೊಸ ಐಫೋನ್ ಖರೀದಿ ಸೇರಿದಂತೆ ಹಲವು ಸೇವೆಯನ್ನು ನೀಡಲಿದೆ. ಕೆಲವೇ ಕ್ಲಿಕ್ಗಳೊಂದಿಗೆ ಯಾವುದೇ ಮ್ಯಾಕ್ ಅನ್ನು ಕಸ್ಟಮ್-ಕಾನ್ಫಿಗರ್ ಮಾಡುವ ಸಾಮರ್ಥ್ಯವನ್ನು ಕೂಡ ಆನ್ಲೈನ್ ಸ್ಟೋರ್ ಒದಗಿಸುತ್ತದೆ.
ಟ್ರೇಡ್-ಇನ್ ಎಂಬ ಪ್ರೋಗ್ರಾಂನೊಂದಿಗೆ, ಆಪಲ್ ಸ್ಟೋರ್ ನಲ್ಲಿ ಕೈಗೆಟುಕುವ ಆಯ್ಕೆಗಳು ಆನ್ಲೈನ್ ನಲ್ಲಿ ಲಭ್ಯ. ವಿಶೇಷ ಬೆಲೆಯೊಂದಿಗೆ ವಿದ್ಯಾರ್ಥಿಗಳು ಮ್ಯಾಕ್ ಅಥವಾ ಐಪ್ಯಾಡ್ಗಾಗಿ ಶಾಪಿಂಗ್ ಮಾಡಬಹುದು. ಜೊತೆಗೆ ಬಿಡಿಭಾಗಗಳನ್ನು ರಿಯಾಯಿತಿಯಲ್ಲಿ ಪಡೆಯಬಹುದು.
ಆ್ಯಪಲ್ ಕೇರ್+ ಕುರಿತ ಮಾಹಿತಿಯನ್ನು ಗ್ರಾಹಕರಿಗೆ ನೀಡಲಿದ್ದು, ಗ್ರಾಹಕರಿಗೆ ಯಾವುದೇ ರೀತಿಯ ಬೆಂಬಲ, ಸಹಾಯ ಒದಗಿಸಲಿದೆ.
ಆಪಲ್ ಪ್ರಸ್ತುತ ದೇಶದಲ್ಲಿ ತನ್ನ ಸಾಧನಗಳನ್ನು ಮಾರಾಟ ಮಾಡಲು ಥರ್ಟ್ ಪಾರ್ಟಿ ರಿಟೇಲರ್ ಮತ್ತು ಆನ್ಲೈನ್ ತಾಣಗಳ ಮೂಲಕ ಮಾರಾಟ ಮಾಡುತ್ತಿದೆ. ಈಗ ತನ್ನದೇ ಆದ ಬ್ರಾಂಡ್ ಆನ್ಲೈನ್ ಸ್ಟೋರ್ ಆರಂಭಿಸಿದ್ದು ಕಂಪನಿಯು ತನ್ನ ಸಾಧನಗಳು ಮತ್ತು ಸೇವೆಗಳ ನಿಯಂತ್ರಿತ ಅನುಭವವನ್ನು ನೀಡುವಲ್ಲಿ ಖಂಡಿತವಾಗಿಯೂ ಇದು ನೆರವಾಗಲಿದೆ.
ಲಾಜಿಸ್ಟಿಕ್ಸ್ ಬೆಂಬಲಕ್ಕಾಗಿ, ಆಪಲ್ ತನ್ನ ಆನ್-ಗ್ರೌಂಡ್ ಪೂರೈಸುವ ಪಾಲುದಾರನಾಗಿ ಬ್ಲೂ ಡಾರ್ಟ್ ಜೊತೆ ಪಾಲುದಾರಿಕೆ ಹೊಂದಿದೆ. ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಲ್ಲಾ ಪ್ರೀಮಿಯಂ ಮತ್ತು ಹೊಸ ಉತ್ಪನ್ನಗಳ ಖರೀದಿಗಳು ನೋ ಕಾಂಟಾಕ್ಟ್ ಡೆಲಿವರಿ ಮೂಲಕ ಉಚಿತವಾಗಿ ಲಭ್ಯವಾಗಲಿದೆ.








