ರಾಜ್ಯ ದೇಹದ್ರಾಡ್ರ್ಯ ಸಂಸ್ಥೆಗೆ ನೂತನ ಪದಾಧಿಕಾರಿಗಳ ನೇಮಕ
ಬೆಂಗಳೂರು : ಕರ್ನಾಟಕ ಅಮೆಚೂರ್ ಬಾಡಿಬಿಲ್ಡರ್ಸ್ ಅಸೋಸಿಯೇಶನ್ ಗೆ ಫೆಬ್ರವರಿ 21 ರಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಶ್ರೀ ಟಿ.ಆರ್. ಮಂಜುನಾಥ್ ಹೆಗ್ಡೆ ಅವರು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಜೊತೆಗೆ ಸಂಸ್ಥೆಯ ಕಾರ್ಯದರ್ಶಿಯಾಗಿ ವರ್ತೂರ್ ನ ರಾಕ್ ಜಿಮ್ ನ ಎಂ. ಶ್ರೀನಿವಾಸ್ ಆಯ್ಕೆಯಾದರು.
ಸಂಸ್ಥೆಯ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವ ವಿವರಗಳು:
ಹಿರಿಯ ಉಪಾಧ್ಯಕ್ಷ: ಬಿ.ಕೃಷ್ಣ ರಾವ್, ಉಪಾಧ್ಯಕ್ಷರು: ರೇಮಂಡ್ ಡಿ ಸೋಜಾ, ವಿ. ಶ್ರೀನಿವಾಸ (ಸುಂಕದ ಕಟ್ಟೆ) ಎಲ್.ಎಂ. ಕರಿಬಸಪ್ಪ, ಸಂತೋಷ್ ಶೆಟ್ಟಿ, ಶ್ರೀನಿವಾಸ ರೆಡ್ಡಿ, ದೀಪಕ್ ಕಾವೇರಪ್ಪ, ಮನೋಜ್ ಕುಮಾರ್, ರೋಷನ್ ಫೆರೋ.
ಹಿರಿಯ ಜಂಟಿ ಕಾರ್ಯದರ್ಶಿ: ಕೆ. ವೆಂಕಟೇಶ್ ಜಂಟಿ ಕಾರ್ಯದರ್ಶಿಗಳು: ಕೆ. ರಾಜೇಶ್ ರಾವ್, ಎಸ್.ಪಿ. ಶ್ರೀನಿವಾಸ್ ಸ್ವಾಮಿ, ಜಿ. ಜೈರಾಮ, ಶ್ರೀಮತಿ. ರೇಖಾ ಕೆ.ರಾವ್,
ಖಜಾಂಚಿ: ಕಾಮೇಶ್ ಎಸ್. ರಾವ್
ಕಾರ್ಯಕಾರಿ ಸಮಿತಿ ಸದಸ್ಯರು: ಬಿ. ಸ್ಟೀಫನ್, ವಿ. ಕೃಷ್ಣ, ಶಂಕರ್ ಗೌಡ, ಹೇಮಂತ್ ಕುಮಾರ್, ಶಿವಶಂಕರ್, ವಿಶ್ವಾಸಗೌಡ, ಪ್ರಸಾಂತ್ ಸಾಗರ್.
ಜಿಲ್ಲಾ ಸಂಸ್ಥೆಗಳು : ಬೆಳಗಾವಿ, ದಕ್ಷಿಣ ಕನ್ನಡ, ಹಾಸನ, ಮೈಸೂರು, ತುಮಕೂರು, ವಿಜಯನಗರ, ಉಡುಪಿ.
