ನವದೆಹಲಿ: ಕಾಂಗ್ರೆಸ್ ನಾಯಕ ರಾಹಲ್ ಗಾಂಧಿ ಆರೋಪಕ್ಕೆ ಭಾರತೀಯ ಸೇನೆ ಪಟ್ಟಿ ಬಿಡುಗಡೆ ಮಾಡಿ ಉತ್ತರ ನೀಡಿದೆ.
ಕರ್ತವ್ಯದಲ್ಲಿದ್ದು, ಹುತಾತ್ಮರಾದ ಅಗ್ನಿವೀರರಿಗೆ (Agniveer) ಸರ್ಕಾರದಿಂದ ಹಣ ಸಿಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಇದಕ್ಕೆ ಭಾರತೀಯ ಸೇನೆ ಪ್ರತಿಕ್ರಿಯೆ ನೀಡಿದೆ. ಅಗ್ನಿವೀರರಿಗೆ ಒಟ್ಟು 1.13 ಕೋಟಿ ರೂ. ಪರಿಹಾರ ಸಿಗುತ್ತದೆ ಎಂದು ಹೇಳಿದೆ.
ಸಿಯಾಚಿನ್ನಲ್ಲಿ ಹುತಾತ್ಮರಾದ ಅಗ್ನಿವೀರ್ ಅಕ್ಷಯ್ ಲಕ್ಷ್ಮಣ್ಗೆ ಸಂತಾಪ ಸೂಚಿಸಿದ್ದ ರಾಹುಲ್ ಗಾಂಧಿ, ಅವರಿಗೆ ಯಾವುದೇ ಗ್ರಾಚ್ಯೂಟಿ ಇಲ್ಲ. ಮಿಲಿಟರಿ ಸೌಲಭ್ಯಗಳಿಲ್ಲ, ಕುಟುಂಬಕ್ಕೆ ಪಿಂಚಣಿ ಇಲ್ಲ ಎಂದು ಆರೋಪಿಸಿದ್ದರು. ಇದು ಭಾರತದ ವೀರರನ್ನು ಅವಮಾನಿಸುವ ಯೋಜನೆ ಎಂದು ಕಿಡಿಕಾರಿದ್ದರು.
ಸದ್ಯ ಈ ಕುರಿತು ಎಡಿಜಿಪಿ ಇಂಡಿಯನ್ ಆರ್ಮಿ (ADGP Indian Army) ಎಕ್ಸ್ನಲ್ಲಿ ಕರ್ತವ್ಯದಲ್ಲಿರುವ ಅಗ್ನಿವೀರರಿಗೆ ಸರ್ಕಾರದಿಂದ ಸಿಗುವ ಪರಿಹಾರದ ವಿವರಗಳನ್ನು ಪಟ್ಟಿ ಮಾಡಿ ಬಿಡುಗಡೆ ಮಾಡಿದೆ.