ಭಾರತದ ಮೇಲೆ ದಾಳಿ ಮಾಡಲು ಪಾಕ್ ನಿಂದ ಹಣ ಪಡೆದಿದ್ದ ಭಯೋತ್ಪಾದಕ ಸಾವು…
ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನದಿಂದ ಹಣ ಪಡೆದು ಭಾರತಕ್ಕೆ ನುಸುಳಿದ್ದ ಬಂಧಿತ ಭಯೋತ್ಪಾದಕ ಶನಿವಾರ ಹೃದಯಾಘಾತದಿಂದ ಸಾವನ್ನಪ್ಪಾಪ್ಪಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಸೇನಾ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದ.
ಎರಡು ವಾರಗಳ ಹಿಂದೆ ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ಒಳನುಸುಳುವಾಗ ತಬರಕ್ ಹುಸೇನ್ ಎಂಬಾತನನ್ನ ಜಮ್ಮು ಕಾಶ್ಮೀರದ ಸೈನಿಕರು ಗುಂಡು ಹೊಡೆದು ಬಂಧಿಸಿದ್ದರು.
ಸೇನೆಯ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಆತನನ್ನ ಸೇನಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಫಿದಾಯಿನ್ ಭಯೋತ್ಪಾದಕ ದಾಳಿಯನ್ನು ನಡೆಸಲು ಪಾಕಿಸ್ತಾನದ ಸೇನೆಯು ತನ್ನನ್ನು ಕಳುಹಿಸಿದೆ
ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಕರ್ನಲ್ ಯೂನಸ್ ಚೌಧರಿ ಎಂಬುವವರು ತನಗೆ 30,000 ಪಾಕಿಸ್ತಾನಿ ರೂಪಾಯಿಗಳನ್ನು ಪಾವತಿಸಿದ್ದರು ಎಂದು ತಬಾರಕ್ ಹುಸೇನ್ ಹೇಳಿಕೆ ನೀಡಿದ್ದಾನೆ.