ಕೋಚ್ ಆಗಿ ರಾಹುಲ್ ದ್ರಾವಿಡ್… ರೂಟೇ ಸಪರೇಟು Rahul Dravid saaksha tv
ಯಾವುದೇ ತಂಡ ಭಾರತಕ್ಕೆ ಸರಣಿ ಆಡಲು ಬಂದಾಗ ನಮ್ಮ ಬೌಲರ್ ಗಳಿಗೆ ತಕ್ಕಂತೆ ಪಿಚ್ ಸಿದ್ಧಪಡಿಸೋದು ಸಹಜ.
ಆದರೆ ಕ್ರಿಕೆಟ್ ಬ್ರಹ್ಮ ರಾಹುಲ್ ದ್ರಾವಿಡ್ ಅವರ ದಾರಿಯೇ ಬೇರೆ. ಟೀಂ ಇಂಡಿಯಾಗೆ ಮುಖ್ಯ ಕೋಚ್ ಆಗಿ ಆಯ್ಕೆಯಾದಾಗಿನಿಂದಲೂ ದ್ರಾವಿಡ್ ತಮ್ಮ ಮಾರ್ಕ್ ಕೋಚಿಂಗ್ ಏನೆಂಬುದನ್ನು ತೋರಿಸುತ್ತಲೇ ಬಂದಿದ್ದಾರೆ.
ಈ ಮಧ್ಯೆ ನ್ಯೂಜಿಲೆಂಡ್ ಮತ್ತು ಟೀಂ ಇಂಡಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಬಗ್ಗೆ ಕುತೂಹಲಕಾರಿ ವಿಷಯ ಹೊರಬಿದ್ದಿದೆ.
ಕಾನ್ಪುರದಲ್ಲಿ ನಡೆದ ಟೆಸ್ಟ್ ಗೆ ಸ್ಪೋರ್ಟಿಂಗ್ ಪಿಚ್ ತಯಾರಿಸುವಂತೆ ಗ್ರೌಂಡ್ ಮ್ಯಾನೇಜ್ ಮೆಂಟ್ ಗೆ ಸೂಚಿಸಲಾಗಿತ್ತಂತೆ.
ಅದಕ್ಕಾಗಿ ದ್ರಾವಿಡ್ ತಮ್ಮ ಪರ್ಸನಲ್ ಅಕೌಂಟ್ ಯಿಂದ 35,000 ರೂಪಾಯಿ ಗ್ರೌಂಡ್ ಮ್ಯಾನ್ ಕೊಟ್ಟಿರುವುದಾಗಿ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ.
ಈ ವಿಷಯ ತಿಳಿದ ನಂತರ ದ್ರಾವಿಡ್ ಮೇಲಿನ ಗೌರವ ಮತ್ತಷ್ಟು ಹೆಚ್ಚಿದೆ ಎಂದು ಯುಪಿ ಕ್ರಿಕೆಟ್ ಹೇಳಿದೆ.
ದ್ರಾವಿಡ್ ಕ್ರಿಕೆಟ್ ಆಡುವಾಗ ಆಟವು ನ್ಯಾಯಯುತ ಮತ್ತು ಸ್ಪೋರ್ಟಿಯಾಗಿರಬೇಕೆಂದು ಬಯಸುತ್ತಾರೆ. ಇಷ್ಟು ವರ್ಷಗಳ ನಂತರವೂ ದ್ರಾವಿಡ್ ಅದೇ ಸ್ವಭಾವವನ್ನು ಉಳಿಸಿಕೊಂಡಿದ್ದಾರೆ.
ಪಿಚ್ ತಮ್ಮ ಪರವಾಗಿ ಅಲ್ಲದೇ ಸ್ಪೋಟಿರ್ಂಗ್ ಪಿಚ್ ತಯಾರು ಮಾಡುವಂತೆ ಹೇಳೋದು ರಾಹುಲ್ ದ್ರಾವಿಡ್ ಮಾತ್ರ ಸಾಧ್ಯ. ಸದ್ಯ ರಾಹುಲ್ ಅವರ ಈ ಕೆಲಸ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದೆ.
ಪಂದ್ಯ ಡ್ರಾ ಆಗಿದೆ ಅನ್ನೋ ಬೇಸರಕ್ಕಿಂತ ದ್ರಾವಿಡ್ ಅವರ ಈ ಕೆಲಸ ತುಂಬಾ ಖುಷಿಯನ್ನ ಕೊಡುತ್ತಿದೆ. ರಾಹುಲ್ ದ್ರಾವಿಡ್ ಅವರ ಹಾದಿಯೇ ಪ್ರತ್ಯೇಕ ಎಂದು ನೆಟ್ಟಿಗರು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.









