Asia Cup 2022 : ಟೀಂ ಇಂಡಿಯಾ ಪ್ಲೇಯಿಂಗ್ 11 ಬಗ್ಗೆ ಅಖ್ತರ್ ಟೀಕೆ
ಏಷ್ಯಾಕಪ್ ಟೂರ್ನಿಯ ಸೂಪರ್ 4 ರ ಹಂತದಲ್ಲಿ ಸೋಲುಂಡಿರುವ ಟೀಂ ಇಂಡಿಯಾಗೆ ಪಾಕ್ ಮಾಜಿ ಕ್ರಿಕೆಟರ್ ಶೋಯೆಬ್ ಅಕ್ತರ್ ಪುಕ್ಕಟೆ ಸಲಹೆ ನೀಡಿದ್ದಾರೆ.
ಪ್ಲೇಯಿಂಗ್ 11 ಬಗ್ಗೆ ಕನಿಷ್ಠ ತಂಡದ ಹೆಡ್ ಕೋಚ್ ಗಾದ್ರೂ ಮಾಹಿತಿ ಇರಬೇಕು.
ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ಇಷ್ಟೊಂದು ಗೊಂದಲವೇಕೆ ? 11 ಜನರ ತಂಡವನ್ನು ಆಯ್ಕೆ ಮಾಡಲು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನಾನಾ ಕಷ್ಟಗಳನ್ನು ಬೀಳುತ್ತಿದೆ.
ಒಬ್ಬ ಆಟಗಾರ ಗಾಯಗೊಂಡರೇ ಪರ್ಯಾಯ ಆಟಗಾರನನ್ನ ಮೊದಲ ಸಿದ್ಧ ಮಾಡಿಕೊಂಡಿರಬೇಕು ಎಂದು ಪುಕ್ಕಟ್ಟೆ ಸಲಹೆ ನೀಡಿದ್ದಾರೆ.

ಗಾಯದ ಸಮಸ್ಯೆಯಿಂದ ರವೀಂದ್ರ ಜಡೇಜಾ, ಅನಾರೋಗ್ಯದಿಂದ ಆವೇಶ್ ಖಾನ್ ತಂಡಕ್ಕೆ ದೂರವಾಗಿದ್ದರು.
ಅವರ ಸ್ಥಾನದಲ್ಲಿ ಸ್ಪೆಷಲಿಸ್ಟ್ ಗಳನ್ನು ತಂಡಕ್ಕೆ ಕರೆತರಬೇಕಾಗಿತ್ತು. ಅದು ಬಿಟ್ಟು ಬೇಕಾಬಿಟ್ಟಿ ಬದಲಾವಣೆಗಳನ್ನು ಮಾಡಿ ಕೈ ಸುಟ್ಟಿಕೊಂಡಿದ್ದಾರೆ.
ಸ್ಪೆಷಲಿಸ್ಟ್ ವಿಕೆಟ್ ಕೀಪರ್ ಕಮ್ ಫಿನಿಷರ್ ಕೋಟಾದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಕೈ ಬಿಟ್ಟು ಎಕ್ಸ್ ಟ್ರಾ ಸ್ಪಿನ್ನರ್ ತೆಗೆದುಕೊಂಡಿದ್ದು ಯಾಕೆ ಎಂದು ಅಖ್ತರ್ ಪ್ರಶ್ನಿಸಿದ್ದಾರೆ.
ಆಲ್ ರೌಂಡರ್ ಕೋಟಾದಲ್ಲಿ ದೀಪಕ್ ಹೂಡಾ ಅವರನ್ನ ಆಯ್ಕೆ ಮಾಡಿಕೊಂಡ ಮೇಲೆ ಆತನ ಕೈಯಲ್ಲಿ ಒಂದೇ ಒಂದು ಓವರ್ ಬೌಲಿಂಗ್ ಮಾಡಿಸದೇ ಇದ್ದದ್ದು ಯಾಕೆ ಎಂದು ಪ್ರಶ್ನಿಸಿದರು.
ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೊಂದಲಮಯವಾಗಿತ್ತು ಎಂದು ಅಖ್ತರ್ ಹೇಳಿದ್ದಾರೆ.