Asia Cup 2022 : ಏಷ್ಯಾ ಕಪ್ ನಲ್ಲೂ ಕಣಕ್ಕಿಳಿಯಲ್ಲ ವಿರಾಟ್ ಕೊಹ್ಲಿ
ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ಯಾಡ್ ಫಾರ್ಮ್ ನಲ್ಲಿರೋದು ಗೊತ್ತಿರುವ ವಿಚಾರವೇ.
ಕೊಹ್ಲಿ ಸೆಂಚೂರಿ ಸಿಡಿಸಿ ಮೂರುವರೆ ವರ್ಷಗಳು ಕಳೆದಿವೆ. ಒಂದು ಕಾಲದಲ್ಲಿ ಸೆಂಚೂರಿಗಳ ಮೇಲೆ ಸೆಂಚೂರಿಗಳನ್ನ ಬಾರಿಸುತ್ತಾ ಅಬ್ಬರಿಸಿದ ವಿರಾಟ್ ಕೊಹ್ಲಿ ಇದೀಗ ಹಾಫ್ ಸೆಂಚೂರಿ ಕೂಡ ಮುಟ್ಟುತ್ತಿಲ್ಲ.
ತನ್ನ ಪ್ರದರ್ಶನದಿಂದ ಸಾಕಷ್ಟು ಟೀಕೆಗೆ ಒಳಗಾಗುತ್ತಿರುವ ವಿರಾಟ್ ಕೊಹ್ಲಿ ಅವರನ್ನ ವಿಶ್ರಾಂತಿ ಹೆಸರಲ್ಲಿ ತಂಡದಿಂದ ದೂರ ಇಡುವ ಕೆಲಸ ನಡೆಯುತ್ತಿದೆ.
ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದಲ್ಲಿ ಮಿಂಚದ ವಿರಾಟ್ ಕೊಹ್ಲಿ ಅವರನ್ನ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ, ಟಿ 20 ಸರಣಿಯಿಂದ ದೂರ ಇಡಲಾಗಿದೆ.
ಇನ್ನು ಕೊಹ್ಲಿ ಅವರನ್ನ ಜಿಂಬಾಬೆ ಟೂರಿಗೆ ಸೆಲೆಕ್ಟ್ ಮಾಡುತ್ತಾರೆ ಅಂತಾ ಎಲ್ಲರೂ ಭಾವಿಸಿದ್ದರು. ಆದ್ರೆ ಶನಿವಾರ ಪ್ರಕಟಿಸಿದ ತಂಡದಲ್ಲಿ ವಿರಾಟ್ ಕೊಹ್ಲಿಯ ಹೆಸರೇ ಇಲ್ಲ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ತಿಳಿಸಿದೆ. ಆದ್ರೆ ಫಾರ್ಮ್ ನಲ್ಲೇ ಇಲ್ಲದ ವಿರಾಟ್ ಕೊಹ್ಲಿ ವಿಶ್ರಾಂತಿ ಯಾಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಇದು ಹೀಗಿದ್ದರೇ ಸ್ವತಃ ವಿರಾಟ್ ಕೊಹ್ಲಿ ಅವರೇ ಏಷ್ಯಾ ಕಪ್ ನಿಂದ ದೂರ ಇರಲು ನಿರ್ಧಾರ ಮಾಡಿದ್ದಾರಂತೆ. ಈ ವಿಚಾರವನ್ನು ವಿರಾಟ್ ಕೊಹ್ಲಿ ಸ್ವತಃ ಫೋನ್ ಮೂಲಕ ಬಿಸಿಸಿಐ ಅಧಿಕಾರಿಗಳಿಗೆ ತಿಳಿಸಿದ್ದಾರಂತೆ.
ಈ ಬಗ್ಗೆ ಬಿಸಿಸಿಐ ಅಧಿಕಾರಿ ಮಾತನಾಡಿದ್ದು, ವಿರಾಟ್ ಕೊಹ್ಲಿ ಸೆಲೆಕ್ಟರ್ ಗಳಿಗೆ ಕಾಲ್ ಮಾಡಿದ ವಿಚಾರ ನಿಜವೇ. ಏಷ್ಯಾ ಕಪ್ ಗೆ ಲಭ್ಯವಿರೋದಿಲ್ಲ ಎಂದು ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.
ಏಷ್ಯಾ ಕಪ್ ಗಾಗಿ ಕೆಲವರಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಟಿ 20 ವಿಶ್ವಕಪ್ ವರೆಗೂ ಟೀಂ ಇಂಡಿಯಾಗೆ ಬಿಜಿ ಶೆಡ್ಯೂಲ್ ಇರಲಿದೆ. ಅದಕ್ಕಾಗಿಯೇ ರೋಟೇಷನ್ ಪಾಲಿಸಿ ಹೆಸರಲ್ಲಿ ಆಟಗಾರರಿಗೆ ರೆಸ್ಟ್ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಆಗಸ್ಟ್ 27 ರಿಂದ ಸೆಪ್ಟಂಬರ್ 11 ರವರೆಗೂ ಏಷ್ಯಾಕಪ್ ಪಂದ್ಯಾವಳಿಗಳು ನಡೆಯಲಿವೆ.








