Asim Munir: ಪಾಕಿಸ್ತಾನದ ನೂತನ ಸೇನಾ ಮುಖ್ಯಸ್ಥರಾಗಿ ಅಸೀಮ್ ಮುನೀರ್ ಆಯ್ಕೆ…
ಪಾಕಿಸ್ತಾನದ 16ನೇ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ 6 ವರ್ಷಗಳ ನಂತರ ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಮುಂದಿನ ಸೇನಾ ಮುಖ್ಯಸ್ಥರಾಗಿ ಪೋರ್ ಸ್ಟಾರ್ ರ್ಯಾಂಕ್ ಪಡೆದಿರು ಅಸೀಮ್ ಮುನೀರ್ ನೂತನ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.
ರಾವಲ್ಪಿಂಡಿಯ ಸೇನಾ ಪ್ರಧಾನ ಕಛೇರಿಯಲ್ಲಿ ಬಾಜ್ವಾ ಅವರು ಕಮಾಂಡ್ ಸ್ಟಿಕ್ ಅನ್ನು ಮುನೀರ್ಗೆ ಹಸ್ತಾಂತರಿಸಲಿದ್ದಾರೆ. ಕಮಾಂಡ್ ಆಫ್ ಕಮಾಂಡ್ ತೆಗೆದುಕೊಂಡ ನಂತರವೇ ಮುನೀರ್ ಅವರನ್ನು ಅಧಿಕೃತವಾಗಿ ಸೇನಾ ಮುಖ್ಯಸ್ಥ ಎಂದು ಕರೆಯಲಾಗುವುದು.
ಜನರಲ್ ಬಜ್ವಾ ತಮ್ಮ ನಿವೃತ್ತಿಗೂ ಒಂದು ದಿನ ಮೊದಲು ಸೋಮವಾರ ಅಧ್ಯಕ್ಷ ಆರಿಫ್ ಅಲ್ವಿ ಮತ್ತು ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾದರು. “ಎಫ್ಎಟಿಎಫ್ನ ಗ್ರೇ ಲಿಸ್ಟ್, ಕರೋನವೈರಸ್ ಮತ್ತು ಪ್ರವಾಹದಂತಹ ಕಷ್ಟಕರ ಸಂದರ್ಭಗಳಿಂದ ನಾವು ಹೊರಬರಲು ಬಾಜ್ವಾ ಸಾಹೇಬ್ ಕಾರಣ” ಎಂದು ಷರೀಫ್ ಹೇಳಿದ್ದಾರೆ.
22 ಕೋಟಿ ಜನಸಂಖ್ಯೆ ಹೊಂದಿರುವ ಪಾಕಿಸ್ತಾನ ಪ್ರಜಾಪ್ರಭುತ್ವವಾಗಿದ್ದರೂ ಆದೇಶದ ಅತಿದೊಡ್ಡ ಶಕ್ತಿಯೆಂದರೇ ಅದು ಸೇನೆಯಾಗಿದೆ. 8 ತಿಂಗಳ ಹಗ್ಗಜಗ್ಗಾಟದ ನಂತರ ಸೇನಾ ಮುಖ್ಯಸ್ಥರಾಗಿ ಬಜ್ವಾ ಅವರೆ ಮುಂದುವರೆಯುತ್ತಾರೆ ಎಂದು ಹೇಳಲಾಗಿತ್ತಿ ಆದರೇ ಇದೀಗ ಊಹಾಪೋಹಗಳು ಕೊನೆಗೊಂಡಿದ್ದು, ಅಸೀಮ್ ಮುನೀರ್ ಸೇನಾ ಮುಖ್ಯಸ್ಥನಾಗಿ ಆಯ್ಕೆಯಾಗದುವುದು ಸ್ಪಷ್ಟವಾಗಿದೆ.
Asim Munir: Asim Munir chosen as Pakistan’s new army chief…