ಅಸ್ಸಾಂ ರಾಜ್ಯದಲ್ಲಿ ಕೋವಿಡ್ ನಿರ್ಬಂಧ ಹಿಂಪಡೆದ ಮುಖ್ಯಮಂತ್ರಿ..
ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಮತ್ತು ಸಾಂಕ್ರಾಮಿಕ ಪರಿಸ್ಥಿತಿ ಸುಧಾರಿಸಿರುವುದರಿಂದ ಫೆಬ್ರವರಿ 15 ರಿಂದ ಎಲ್ಲಾ COVID-ಸಂಬಂಧಿತ ನಿರ್ಬಂಧಗಳನ್ನು ಹಿಂಪಡೆಯಲಿದ್ದೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೋಮವಾರ ಹೇಳಿದ್ದಾರೆ.
ಶಾಲಾ ಬೋರ್ಡ್ ಪರೀಕ್ಷೆಗಳು, ಪುರಸಭೆ ಚುನಾವಣೆಗಳು ಮತ್ತು ಮಜುಲಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಇನ್ನೆರಡು ತಿಂಗಳಲ್ಲಿ ನಡೆಯಲಿದೆ ಎಂದು ಶರ್ಮಾ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಎರಡೂ ಡೋಸ್ ಲಸಿಕೆಯನ್ನು ಪಡೆಯಬೇಕು ಎಂದು ಅವರು ಹೇಳಿದರು. ರಾತ್ರಿ ಕರ್ಫ್ಯೂ ಇರುವುದಿಲ್ಲ, ಮಾಲ್‌ಗಳು ಮತ್ತು ಸಿನಿಮಾ ಹಾಲ್‌ಗಳು ಪೂರ್ಣ ಸಾಮರ್ಥ್ಯದೊಂದಿಗೆ ತೆರೆಯಲ್ಪಡುತ್ತವೆ ಮತ್ತು ಮದುವೆಗಳನ್ನು ರಾತ್ರಿಯಿಡೀ ನಡೆಸಬಹುದು ಆದರೆ ಅತಿಥಿಗಳು ಎರಡು ಡೊಸ್ ಲಸಿಕೆ ಹಾಕಿಸಿರಬೇಕು ಎಂದು ಶರ್ಮಾ ಹೇಳಿದರು. ಎಲ್ಲಾ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂಬುದನ್ನ ತೊರಿಸಿದರು.