Astrology : ಬನದ ಹುಣ್ಣಿಮೆಯಂದು ದೇವಿ ಬನಶಂಕರಿಯನ್ನು ಆರಾಧಿಸಿ ನಿಮ್ಮ ಸಂಕಷ್ಟಗಳನ್ನು ನಿವಾರಿಸಿಕೊಳ್ಳಿ
ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹುಣ್ಣಿಮೆಗಳಿಗಿರುವ ವಿಶೇಷತೆಯಂತೆ ಪುಷ್ಯ ಮಾಸದಲ್ಲಿ ಬರುವ ಹುಣ್ಣಿಮೆಗೂ ಅತ್ಯಂತ ಮಹತ್ವವನ್ನೂ ನೀಡಲಾಗುತ್ತದೆ. ಈ ಹುಣ್ಣಿಮೆಯಂದು ಯಾವ ಪೂಜೆ, ಪುನಸ್ಕಾರ, ವ್ರತಾಚರಣೆಯನ್ನು ಮಾಡಬೇಕು ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಹಿಂದೂ ಧರ್ಮದಲ್ಲಿ ಹುಣ್ಣಿಮೆ ಹಾಗೂ ಅಮಾವಾಸ್ಯೆಗಳಿಗೆ ಬಹಳಷ್ಟು ಮಹತ್ವ ನೀಡಲಾಗುತ್ತದೆ. ವರ್ಷದಲ್ಲಿ ಬರುವಂತಹ 12 ಹುಣ್ಣಿಮೆಗಗಳಿಗೂ ಒಂದೊಂದು ವಿಶೇಷತೆ ಇರುವಂತೆ ಪುಷ್ಯ ಮಾಸದಲ್ಲಿ ಬರುವಂತಹ ಹುಣ್ಣಿಮೆಗೂ ಇದೆ. ಈ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎಂದೂ ಕರೆಯುತ್ತಾರೆ.
ಈ ಬಾರಿ ಪುಷ್ಯಮಾಸದ ಹುಣ್ಣಿಮೆಯು ಜನವರಿ 6 ರ ಶುಕ್ರವಾರ ದಂದು ಅಂದರೆ ಹಿಂದೂ ಪಂಚಾಂಗದ ಪ್ರಕಾರ ಪುಷ್ಯ ಮಾಸದ ಶುಕ್ಲ ಪಕ್ಷದ ಪೂರ್ಣಿಮಾ ದಿನದಂದು ನಡೆಯಲಿದೆ. ಅತ್ಯಂತ ಪವಿತ್ರವಾದ ಈ ದಿನ ಪೌರ್ಣಮಿ ಉಪವಾಸ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯನ್ನು ಮಾಡಿದರೆ ಶ್ರೇಷ್ಠವೆನ್ನುತ್ತಾರೆ. ಪುಷ್ಯ ಹುಣ್ಣಿಮೆಯ ಇನ್ನೊಂದು ವಿಶೇಷತೆಯೆಂದರೆ ಮಾಘ ಸ್ನಾನವು ಕೂಡಾ ಈ ಹುಣ್ಣಿಮೆಯಿಂದ ಆರಂಭವಾಗುತ್ತದೆ.
ಹುಣ್ಣಿಮೆ ಪೂಜೆಯ ಸಮಯ
ಹುಣ್ಣಿಮೆ ತಿಥಿ ಆರಂಭ: ಜನವರಿ 5 ಗುರುವಾರ ರಾತ್ರಿ 02-13 ರಿಂದ
ಹುಣ್ಣಿಮೆ ತಿಥಿ ಅಂತ್ಯ: ಜನವರಿ 6 ಶುಕ್ರವಾರ ರಾತ್ರಿ 04-36 ರವರೆಗೆ
ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆ ಮಾಡಿದರೆ ಶ್ರೇಷ್ಠವೆಂದು ಹೇಳುತ್ತಾರೆ. ಸತ್ಯನಾರಾಯಣನು ಭಗವಾನ್ ಮಹಾವಿಷ್ಣುವಿನ ಪ್ರತಿರೂಪವೇ ಆಗಿರುವುದರಿಂದ ಕುಟುಂಬದ ಸಂತೋಷ ಹಾಗೂ ಸಮೃದ್ಧಿಗಾಗಿ ವಿಶೇಷವಾಗಿ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸತ್ಯನಾರಾಯಣ ಕಥೆಯನ್ನು ನೀವೇ ಪಠಿಸಬಹುದು ಅಥವಾ ಬ್ರಾಹ್ಮಣರಿಂದಲೂ ಪೂಜೆ ಮಾಡಿಸಬಹುದು.
ಬನದ ಹುಣ್ಣಿಮೆಯು ಪುಷ್ಯ ಮಾಸದಲ್ಲಿ ಬರುವ ಹುಣ್ಣಿಮೆಗಿರುವ ಇನ್ನೊಂದು ಹೆಸರು. ಈ ತಿಂಗಳಲ್ಲಿ ಕೆಲವೆಡೆ ಪುಷ್ಯ ಮಾಸದ ಶುಕ್ಲಪಕ್ಷದ ಅಷ್ಟಮೀ ದಿನದಿಂದ ಬನದ ಹುಣ್ಣಿಮೆಯ ನವರಾತ್ರಿಯನ್ನು ಆಚರಿಸುತ್ತಾರೆ. ಅಷ್ಟಮಿಯಿಂದ ಹುಣ್ಣಿಮೆಯವರೆಗೂ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತದೆ. ಬನದ ಹುಣ್ಣಿಮೆಯಂದು ರಾಜ್ಯದ ಎಲ್ಲಾ ಬನಶಂಕರಿ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ಸೇರಿದಂತೆ ಬನಶಂಕರಿ ರಥೋತ್ಸವವೂ ನಡೆಯುತ್ತದೆ.
ಶುಕ್ರ ಹಾಗೂ ಚಂದ್ರ ಗ್ರಹಗಳ ದೋಷವನ್ನು ಬನಶಂಕರಿ ದೇವಿಯು ನಿವಾರಿಸುತ್ತಾಳೆ ಎನ್ನುವ ನಂಬಿಕೆ ಭಕ್ತರಲ್ಲಿರುವುದರಿಂದ ಈ ದಿನ ಶೀತಬಾಧೆ, ಕಿಡ್ನಿ ಸಮಸ್ಯೆ, ರಕ್ತಕ್ಕೆ ಸಂಬಂಧಪಟ್ಟ ತೊಂದರೆ ಇರುವವರು ಮಾನಸಿಕ ಸಮಸ್ಯೆ, ಹಣಕಾಸಿನ ಸಮಸ್ಯೆ ಇರುವವರ ಪುಷ್ಯ ಮಾಸದ ಹುಣ್ಣಿಮೆಯ ದಿನ ಬನಶಂಕರಿ ದೇವಿಯನ್ನು ಪೂಜಿಸಿದರೆ ಉತ್ತಮ ಫಲವನ್ನು ಪಡೆಯಬಹುದು.
ಶುಕ್ರವಾರ ಹುಣ್ಣಿಮೆಯ ಯೋಗದಲ್ಲಿ ಲಕ್ಷ್ಮೀ ಸಮೇತ ಮಹಾವಿಷ್ಣುವನ್ನು ಪೂಜಿಸಿ. ಅರ್ಚನೆಯನ್ನು ಮಾಡುವಾಗ ಕೇಸರಿ ಮಿಶ್ರಿತ ಹಾಲಿನಿಂದ ಶಂಖದಲ್ಲಿ ಅಭಿಷೇಕ ಮಾಡಿದರೆ ಒಳ್ಳೆಯದು. ಪೌರ್ಣಮಿಯ ದಿನದಂದು ಅಥವಾ ಪೌರ್ಣಮಿಯ ಹಿಂದಿನ ದಿನ ಅಂದರೆ ಚತುರ್ದಶಿಯು ಅಂತ್ಯವಾಗಿ ಹುಣ್ಣಿಮೆ ತಿಥಿಯು ಆರಂಭವಾಗುವಾಗ ಉಪವಾಸ ವ್ರತವನ್ನು ಕೈಗೊಳ್ಳಬಹುದು. ಪೌರ್ಣಮಿಯ ದಿನ ಬಾಲಗೋಪಾಲನನ್ನೂ ತುಳಸಿ ದಳಗಳಿಂದ ಆರಾಧಿಸಬಹುದು.
ಪೌರ್ಣಮಿಯ ದಿನ ಶುಕ್ರವಾರ ಆಂಜನೇಯ ದೇವಾಲಯದಲ್ಲಿ ದೀಪವನ್ನು ಬೆಳಗಿ ಹನುಮಾನ್ ಚಾಲೀಸವನ್ನು ಪಠಿಸಬಹುದು. ಸಮಯವಿದ್ದಲ್ಲಿ ಸುಂದರಕಾಂಡವನ್ನೂ ಓದಬಹುದು. ಜೊತೆಗೆ ‘ಓಂ ಏಂ ಹನುಮತೇ ರಾಮದೂತಾಯ ನಮಃ’ ಮಂತ್ರವನ್ನು ಹೇಳಿದರೆ ಒಳ್ಳೆಯದು.
ಲೇಖನ: ಧಾರ್ಮಿಕಚಿಂತಕರು, ದೇವಾಲಯ ವಾಸ್ತು ತಜ್ಞ ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಶ್ರೀ ಜ್ಞಾನೇಶ್ವರ್ ರಾವ್ ತಂತ್ರಿ ಹಾಗೂ ದೈವಜ್ಞ ಜ್ಯೋತಿಷ್ಯರು ವಿಳಾಸ:- ಜ್ಞಾನೇಶ್ವರ್ ರಾವ್ ತಂತ್ರಿ ಮನೆ, ಕೊಂಡಿಮುಲೆ ಹಳ್ಳಿ, ಕಟೀಲ್ ಪೋಸ್ಟ್, ಮೂಲ್ಕಿ ತಾಲ್ಲೂಕು, ಮಂಗಳೂರು ತಪ್ಪದೆ ಕರೆ ಮಾಡಿ 8548998564








