Aus Open : ಆಸ್ಟ್ರೇಲಿಯಾ ಓಪನ್ ಟೆನಿಸ್ ಓಪನ್ ಡ್ರಾ
ಪ್ರತ್ಯೇಕ ವಿಭಾಗದಲ್ಲಿ ಜೊಕೊವಿಕ್, ನಡಾಲ್ ಕಣಕ್ಕೆ
ಮುಂಬರುವ ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ನವೊಕ್ ಜೊಕೊವಿಕ್ ಮತ್ತು ರಾಫಾಲ್ ನಡಾಲ್ ಪ್ರತ್ಯೇಕ ವಿಭಾಗದಲ್ಲಿ ಆಡಲಿದ್ದಾರೆ.
ಓಪನ್ ಡ್ರಾ ವಿಭಾಗದ ಪಟ್ಟಿ ಬಿಡುಗಡೆಯಾಗಿದೆ. 9 ಬಾರಿ ಚಾಂಪಿಯನ್ ಜೋಕೊವಿಕ್ ಟೂರ್ನಿಯಲ್ಲಿ ನಾಲ್ಕನೆ ಶ್ರೇಯಾಂಕಿತ ಆಟಗಾರರಾಗಿದ್ದು ತಮ್ಮ ಮೊದಲ ಪಂದ್ಯದಲ್ಲಿ ಸ್ಪೇನ್ನ ರೊಬಾರ್ಟೋ ಕಾರಬಾಲ್ಲೆಸ್ ವಿರುದ್ಧ ಸೆಣಸಲಿದ್ದಾರೆ.
ಅಗ್ರ ಆಟಗಾರ ರಾಫಾಲ್ ನಡಾಲ್ ತಮ್ಮ ಮೊದಲ ಪಂದ್ಯದಲ್ಲಿ ಬ್ರಿಟನ್ನ ಜಾಕ್ ಟ್ರಾಪರ್ ವಿರದ್ಧು ಆಡಲಿದ್ದಾರೆ.
ಮತ್ತೋರ್ವ ಅಗ್ರ ಆಟಗಾರ ಆ್ಯಂಡ ಮರ್ರೆ ಮೊದಲ ಪಂದ್ಯದಲ್ಲಿ ಇಟಲಿಯಾ ಮಾಟ್ಟೊ ಬೆರ್ರೆತ್ತಿನಿ ವಿರುದ್ಧ ಕಾದಾಟ ನಡೆಸಲಿದ್ದಾರೆ.
ರಾಫಾಲ್ ನಡಾಲ್, ಜೋಕೊವಿಕ್ಗಿಂದ ಒಂದು ಪ್ರಶಸ್ತಿಗೆ ಹೆಚ್ಚುವರಿಯಾಗಿ ಗೆದ್ದಿದ್ದು ಒಟ್ಟು 22 ಗ್ರ್ಯಾನ್ ಸ್ಲಾಮ್ಗಳನ್ನು ಗೆದ್ದಿದ್ದಾರೆ.
ಮಹಿಳಾ ವಿಭಾಗದಲ್ಲಿ ನಂ.1 ಆಟಗಾರ್ತಿ ಇಗಾ ಸ್ವಿಟೆಕ್ ಜರ್ಮನ್ನ ನೀಮ್ಮೆರ್ ವಿರುದ್ಧ ಮೊದಲ ಪಂದ್ಯದಲ್ಲಿ ಸೆಣಸಲಿದ್ದಾರೆ. ಪೋಲೆಂಡ್ ಆಟಗಾರ್ತಿ ಕಳೆದ ವರ್ಷ ಸೆಮಿಫೈನಲ್ ಪ್ರವೇಶಿಸಿದ್ದರು.ನಂತರ ಫ್ರೆಂಚ್ ಮತ್ತು ಯುಎಸ್ ಓಪನ್ ಗೆದ್ದಿದ್ದರು.
Aus Open , Australia tennis open draw