Aus Open ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟ ಸಾನಿಯಾ ,ಬೋಪಣ್ಣ ಜೋಡಿ
ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸಾನಿಯಾ ಹಾಗೂ ಬೋಪಣ್ಣ ಜೋಡಿ ಕ್ವಾರ್ಟರ್ ಫೈನಲ್ ತಲುಪಿದೆ.
ಸೋಮವಾರ ನಡೆದ ಮಿಶ್ರ ಡಬಲ್ಸ್ ನ ಎರಡನೆ ಸುತ್ತಿನಲ್ಲಿ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಎದುರಾಳಿ ಏರಿಯಲ್ ಬೆಹಾರ್ ಹಾಗೂ ಮಾಕೊಟಾ ನಿನೊಮಿಯಾ 6-4, 7-6 (11-9) ಅಂಕಗಳಿಂದ ಮಣಿಸಿದರು.
ಸಾನಿಯಾ ಮತ್ತು ಬೋಪಣ್ಣ ಜೋಡಿ ಮೊದಲ ಸೆಟ್ನಲ್ಲೆ ಪ್ರಾಬಲ್ಯ ಮೆರೆದು ಮೊದಲ ಸೆಟ್ ಗೆದ್ದರು. ಎದುರಾಳಿ ಜೋಡಿ 2-2 ಸಮಬಲ ಸಾಧಿಸಿತು. ನಂತರ 3-3 ಸಮಬಲ ಸಾಧಿಸಿದ ಭಾರತದ ಜೋಡಿ ಗೆಲುವು ದಾಖಲಿಸಿತು.
ಎರಡನೆ ಸೆಟ್ನಲ್ಲಿ ಬೋಪಣ್ಣ ಮತ್ತು ಸಾನಿಯಾ ಕಠಿಣ ಹೋರಾಟ ನೀಡಿ ಟೈಬ್ರೇಕರ್ ಗೆದ್ದರು.
ಕೊನೆಯ ಗ್ರ್ಯಾನ್ ಸ್ಲಾಮ್ ಆಡುತ್ತಿರುವ ತಾರಾ ಆಟಗಾರ್ತಿ ಸಾನಿಯಾ ಮಿರ್ಜಾ ನಿನ್ನೆ ಮಹಿಳಾ ಡಬಲ್ಸ್ ನಲ್ಲಿ ಸೋತಿದ್ದಾರೆ. ಇದೀಗ ಮಿಶ್ರಡಬಲ್ಸ್ ಪ್ರಶಸ್ತಿ ಗೆಲ್ಲಲು ಹೋರಾಡುತ್ತಿದ್ದಾರೆ.
Aus Open , Sanya , bopanna enters Quarter Finals