ADVERTISEMENT
Wednesday, February 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್ ವಿಶ್ವಕಪ್ 2023

AUS v SL: ಆಡಮ್‌ ಜ್ಹಂಪ ಸ್ಪಿನ್‌ ದಾಳಿಗೆ ಲಂಕಾ ತತ್ತರ: ಆಸೀಸ್‌ಗೆ 210 ರನ್‌ಗಳ ಟಾರ್ಗೆಟ್‌

ಶ್ರೀಲಂಕಾಕ್ಕೆ ಪತುಮ್‌ ನಿಸ್ಸಂಕಾ(61) ಹಾಗೂ ಕುಸಲ್‌ ಪೆರೇರಾ(78) ಆಸರೆ

C Dinesh by C Dinesh
October 16, 2023
in ಕ್ರಿಕೆಟ್ ವಿಶ್ವಕಪ್ 2023
Australia

Australia

Share on FacebookShare on TwitterShare on WhatsappShare on Telegram

ಆರಂಭಿಕರಾದ ಪತುಮ್‌ ನಿಸ್ಸಂಕಾ(61) ಹಾಗೂ ಕುಸಲ್‌ ಪೆರೇರಾ(78) ಅವರ ಉತ್ತಮ ಬ್ಯಾಟಿಂಗ್‌ ನಡುವೆಯೂ ಆಡಂ ಜ್ಹಂಪ ಅವರ ಸ್ಪಿನ್‌ ದಾಳಿಗೆ ತತ್ತರಿಸಿದ ಶ್ರೀಲಂಕಾ, ಏಕದಿನ ವಿಶ್ವಕಪ್‌ನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 209 ರನ್‌ಗಳಿಗೆ ಸರ್ವಪತನ ಕಂಡಿದೆ.

ಲಕ್ನೋದ ಏಕನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಶ್ರೀಲಂಕಾ ನಿರೀಕ್ಷೆಯಂತೆ ಉತ್ತಮ ಆರಂಭ ಕಂಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ವೈಫಲ್ಯಕ್ಕೆ ಸಿಲುಕಿದ ಪರಿಣಾಮ 43.3 ಓವರ್‌ಗಳಲ್ಲಿ 209 ರನ್‌ಗಳಿಗೆ ಆಲೌಟ್‌ ಆಗಿದೆ. ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆಸೀಸ್‌ ಈ ಪಂದ್ಯದ ಗೆಲುವಿಗಾಗಿ 210 ರನ್‌ಗಳ ಟಾರ್ಗೆಟ್‌ ಚೇಸ್‌ ಮಾಡಬೇಕಿದೆ.

Kusal Perera

ಲಂಕಾಕ್ಕೆ ಉತ್ತಮ ಆರಂಭ:
ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಶ್ರೀಲಂಕಾಕ್ಕೆ ಆರಂಭಿಕ ಬ್ಯಾಟರ್‌ಗಳು ಉತ್ತಮ ಅಡಿಪಾಯ ಹಾಕಿಕೊಟ್ಟರು. ಆಸೀಸ್‌ ಬೌಲಿಂಗ್‌ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಪತುಮ್‌ ನಿಸ್ಸಂಕಾ(61) ಹಾಗೂ ಕುಸಲ್‌ ಪೆರೇರಾ(78) ಮೊದಲ ವಿಕೆಟ್‌ಗೆ 125 ರನ್‌ಗಳ ಅತ್ಯುತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು. ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ಈ ಇಬ್ಬರು ದೊಡ್ಡ ಮೊತ್ತವನ್ನ ಕಲೆಹಾಕುವ ನಿರೀಕ್ಷೆ ಮೂಡಿಸಿದ್ದರು.
Adam Zampa

ಲಂಕಾ ಬ್ಯಾಟಿಂಗ್‌ ವೈಫಲ್ಯ:
ಒಂದು ಹಂತದಲ್ಲಿ ವಿಕೆಟ್‌ ನಷ್ಟವಿಲ್ಲದೆ 125 ರನ್‌ಗಳಿಸಿದ್ದ ಶ್ರೀಲಂಕಾದ ಬ್ಯಾಟರ್‌ಗಳಿಗೆ ಲೆಗ್‌ ಸ್ಪಿನ್ನರ್‌ ಆಡಮ್‌ ಜ್ಹಂಪ(4/47) ಬ್ರೇಕ್‌ ಹಾಕಿದರು. ಪರಿಣಾಮ ಆರಂಭಿಕರಿಬ್ಬರು ಔಟಾದ ನಂತರ ಕಣಕ್ಕಿಳಿದ ಯಾವುದೇ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಆಸರೆಯಾಗಲಿಲ್ಲ. ಹೀಗಾಗಿ ಲಂಕಾ ತಂಡದ ಪ್ರಮುಖ ಬ್ಯಾಟರ್‌ಗಳಾದ ಕುಸಲ್‌ ಮೆಂಡಿಸ್‌(9), ಸಮರವಿಕ್ರಮ(8), ಚರಿತ್‌ ಅಸಲಂಕ(25), ಧನಂಜಯ ಡಿಸಿಲ್ವಾ(7) ಬಂದಷ್ಟೇ ವೇಗವಾಗಿ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ಉಳಿದಂತೆ ಕೆಳ ಕ್ರಮಾಂಕದಲ್ಲಿ ಬಂದ ಆಟಗಾರರು ಸಹ ತಂಡಕ್ಕೆ ಆಸರೆಯಾಗಲಿಲ್ಲ.

Related posts

IND v AUS: ವಿಶ್ವಕಪ್‌ 2023ರ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಗಮನ ಸೆಳೆದ ವಿರಾಟ್‌ ಕೊಹ್ಲಿ

IND v AUS: ವಿಶ್ವಕಪ್‌ 2023ರ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಗಮನ ಸೆಳೆದ ವಿರಾಟ್‌ ಕೊಹ್ಲಿ

November 19, 2023
IND v AUS: ಟ್ರಾವಿಸ್‌ ಹೆಡ್‌ ಬೊಂಬಾಟ್‌ ಶತಕ: 6ನೇ ಬಾರಿಗೆ ಏಕದಿನ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ

IND v AUS: ವಿಶ್ವಕಪ್‌ ಫೈನಲ್‌ನಲ್ಲಿ ಆಸೀಸ್‌ ಪರ ಶತಕದ ಸಿಡಿಸಿದ 3ನೇ ಆಟಗಾರ ಟ್ರಾವಿಸ್‌ ಹೆಡ್‌

November 19, 2023

ಜ್ಹಂಪ ಸ್ಪಿನ್‌ ಕೈಚಳಕ:
ಆಸ್ಟ್ರೇಲಿಯಾ ಪರ ಆಡಮ್‌ ಜ್ಹಂಪ(4/47) ಪರಿಣಾಮಕಾರಿ ಬೌಲಿಂಗ್‌ ಮೂಲಕ ಲಂಕಾ ಬ್ಯಾಟಿಂಗ್‌ ಬೆನ್ನೆಲುಬು ಮುರಿದರೆ. ಇವರಿಗೆ ಉತ್ತಮ ಸಾಥ್‌ ನೀಡಿದ ಮಿಚೆಲ್‌ ಸ್ಟಾರ್ಕ್‌ ಹಾಗೂ ನಾಯಕ ಪ್ಯಾಟ್‌ ಕಮ್ಮಿನ್ಸ್‌ ತಲಾ 2 ವಿಕೆಟ್‌ ಪಡೆದರೆ. ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ 1 ವಿಕೆಟ್‌ ಪಡೆದುಕೊಂಡರು.

AUS v SL, Australia, Sri Lanka, Adam Zampa, ODI World Cup

Tags: #Adam ZampaAUS v SLAustraliaODI World CupSri Lanka
ShareTweetSendShare
Join us on:

Related Posts

IND v AUS: ವಿಶ್ವಕಪ್‌ 2023ರ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಗಮನ ಸೆಳೆದ ವಿರಾಟ್‌ ಕೊಹ್ಲಿ

IND v AUS: ವಿಶ್ವಕಪ್‌ 2023ರ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಗಮನ ಸೆಳೆದ ವಿರಾಟ್‌ ಕೊಹ್ಲಿ

by C Dinesh
November 19, 2023
0

ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಸರ್ವಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಮಿಂಚಿದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ, 2023ರ ವಿಶ್ವಕಪ್‌ನ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಪ್ರಸಕ್ತ...

IND v AUS: ಟ್ರಾವಿಸ್‌ ಹೆಡ್‌ ಬೊಂಬಾಟ್‌ ಶತಕ: 6ನೇ ಬಾರಿಗೆ ಏಕದಿನ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ

IND v AUS: ವಿಶ್ವಕಪ್‌ ಫೈನಲ್‌ನಲ್ಲಿ ಆಸೀಸ್‌ ಪರ ಶತಕದ ಸಿಡಿಸಿದ 3ನೇ ಆಟಗಾರ ಟ್ರಾವಿಸ್‌ ಹೆಡ್‌

by C Dinesh
November 19, 2023
0

ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ನಿಂದ ಮಿಂಚಿದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ ಟ್ರಾವಿಸ್‌ ಹೆಡ್‌(137) ತಂಡದ ಗೆಲುವಿನ ಹೀರೋ ಆಗಿ ಮಿಂಚಿದರು. ಅಲ್ಲದೇ ತಮ್ಮ ಈ ಪ್ರದರ್ಶನದ...

IND v AUS: ವಿಶ್ವಕಪ್‌ ಫೈನಲ್‌ ಸೋಲು: ಮೈದಾನದಲ್ಲೇ ಕಣ್ಣೀರಿಟ್ಟ ಆಟಗಾರರು

IND v AUS: ವಿಶ್ವಕಪ್‌ ಫೈನಲ್‌ ಸೋಲು: ಮೈದಾನದಲ್ಲೇ ಕಣ್ಣೀರಿಟ್ಟ ಆಟಗಾರರು

by C Dinesh
November 19, 2023
0

ಕೋಟ್ಯಾಂತರ ಕ್ರಿಕೆಟ್‌ ಪ್ರೇಮಿಗಳಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದ್ದ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳ ಸೋಲಿನ ಆಘಾತದೊಂದಿಗೆ ಟೀಂ ಇಂಡಿಯಾದ ಪ್ರಶಸ್ತಿ ಗೆಲುವಿನ ಕನಸು...

IND v AUS: ಟ್ರಾವಿಸ್‌ ಹೆಡ್‌ ಬೊಂಬಾಟ್‌ ಶತಕ: 6ನೇ ಬಾರಿಗೆ ಏಕದಿನ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ

IND v AUS: ಟ್ರಾವಿಸ್‌ ಹೆಡ್‌ ಬೊಂಬಾಟ್‌ ಶತಕ: 6ನೇ ಬಾರಿಗೆ ಏಕದಿನ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ

by C Dinesh
November 19, 2023
0

ಆರಂಭಿಕ ಬ್ಯಾಟರ್‌ ಟ್ರಾವಿಸ್‌ ಹೆಡ್‌(137) ಬೊಂಬಾಟ್‌ ಶತಕ ಹಾಗೂ ಮಾರ್ನಸ್‌ ಲಬುಶೇನ್‌(58*) ಜವಾಬ್ದಾರಿಯ ಬ್ಯಾಟಿಂಗ್‌ನಿಂದ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತವನ್ನ 6 ವಿಕೆಟ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ...

IND v AUS: ವಿಶ್ವಕಪ್‌ ಸೆಮೀಸ್‌/ಫೈನಲ್‌ನಲ್ಲಿ ಅರ್ಧಶತಕ: ಭಾರತದ ಪರ ದಾಖಲೆ ಬರೆದ ಕೊಹ್ಲಿ

IND v AUS: ವಿಶ್ವಕಪ್‌ ಸೆಮೀಸ್‌/ಫೈನಲ್‌ನಲ್ಲಿ ಅರ್ಧಶತಕ: ಭಾರತದ ಪರ ದಾಖಲೆ ಬರೆದ ಕೊಹ್ಲಿ

by C Dinesh
November 19, 2023
0

ವಿಶ್ವ ಕ್ರಿಕೆಟ್‌ನ ದಾಖಲೆಗಳ ಸರದಾರ ಎನಿಸಿರುವ ಟೀಮ್‌ ಇಂಡಿಯಾದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ, ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಮತ್ತೊಂದು ದಾಖಲೆ ಬರೆದಿದ್ದಾರೆ. ಅಹ್ಮದಾಬಾದ್‌ನಲ್ಲಿ ನಡೆದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram