ಆಸ್ಟ್ರೇಲಿಯಾ ಆಟಗಾರರನ್ನು ಮನೆಗೆ ಕಳುಹಿಸುವ ಅಭಿಮಾನಿಯ ಮನವಿಗೆ ಸ್ಪಂದಿಸಿದ ಸೋನು ಸೂದ್…!
ಕಳೆದ ವರ್ಷ ಲಾಕ್ ಡೌನ್ ಆದಾಗಿನಿಂದ ಇಲ್ಲಿಯವರೆಗೂ ಬಡವರು , ಶ್ರೀಮಂತರು ಅಂತ ನೋಡದೇ… ಜಾಗ ಯಾವುದೇ ಜನ ಯಾರೇ ಇರಲಿ.. ಎಲ್ಲರಿಗೂ ತಮ್ಮ ಕೈಲಾದ ಸಹಾಯ ಮಾಡುತ್ತಾ ಎಲ್ಲರ ಕಷ್ಟಕ್ಕೆ ಮಣಿದಿರುವ ರಿಯಲ್ ಹೀರೋ ಬಾಲಿವುಡ್ ನಟ ಸೋದ್..
ಆಕ್ಸಿಜನ್, ವೆಂಟಿಲೇಟರ್, ಆಸ್ಪತ್ರೆ, ಬೆಡ್ ಸಿಗದೆ ಪರದಾಡುತ್ತಿರುವ ಅದಷ್ಟೋ ಸೋಂಕಿತರಿಗೆ ಸಹಾಯ ಮಾಡಿ ಸೋನು ಸೂದ್ ದೇವರಾಗಿದ್ದಾರೆ. ಈ ನಡುವೆ ಸೋನು ಸೂದ್ ಅವರಿಗೆ ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಮಂದಿ ಮನವಿ ಮಾಡಿಕೊಳ್ತಿದ್ದಾರೆ. ಸೋನು ಸೂದ್ ತಮ್ಮ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಇದೆಲ್ಲದರ ನಡುವೆ ಆಸ್ಟ್ರೇಲಿಯಾ ಆಟಗಾರರನ್ನ ಭಾರತದಿಂದ ಮನೆಗೆ ಕಳುಹಿಸಲು ಸಹಾಯ ಮಾಡುವಂತೆ ಅಭಿಮಾನಿಯೊಬ್ಬರು ಸೋನು ಬಳಿ ಮನವಿ ಮಾಡಿಕೊಂಡಿದ್ದಾರೆ. ಕೊರೊನಾದಿಂದ ಐಪಿಲ್ ರದ್ದಾದ ಬಳಿಕ ಆಸೀಸ್ ಆಟಗಾರರು ಭಾರತದಲ್ಲೇ ಸಿಲುಕ್ದಿದ್ದಾರೆ. ಅವರನ್ನು ವಾಪಸ್ ಆಸ್ಟ್ರೇಲಿಯಾಗೆ ಕಳುಹಿಸಲು ಸಹಾಯ ಮಾಡುವಂತೆ ನೆಟ್ಟಿಗನೊಬ್ಬ ಮನವಿ ಮಾಡಿಕೊಂಡಿದ್ದಾನೆ.
ಟ್ವಿಟ್ಟರ್ ಮೂಲಕ ಸೋನು ಸೂದ್ ಗೆ ಮನವಿ ಮಾಡಿರುವ ನೆಟ್ಟಿಗನು, ‘ಆಸ್ಟ್ರೇಲಿಯಾ ಆಟಗಾರರನ್ನು ಮನೆಗೆ ಕಳುಹಿಸಲು ಸಹಾಯ ಮಾಡುತ್ತೀರಾ ಸೋನು ಸೂದ್ ಭಾಯ್?’ ಎಂದು ಕೇಳಿದ್ದಾನೆ. ಗಮನ ಸೆಳೆಯುತ್ತಿದೆ ಕಾರ್ಟೂನ್ ಮನವಿ ಜೊತೆಗೆ ಕಾರ್ಟೂನ್ ಅನ್ನು ಶೇರ್ ಮಾಡಿದ್ದಾರೆ. ಐಸಿಯು, ಬೆಡ್, ಆಕ್ಸಿಜನ್ ಸಹಾಯ ಮಾಡುತ್ತಿರುವ ಸೋನು ಸೂದ್ ಗೆ ಆಸೀಸ್ ಆಟಗಾರರಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮ್ಯಾಕ್ಸ್ ವೆಲ್ ಎಲ್ಲರೂ ಸೋನು ಸೂದ್ ಬಳಿ ಮನೆಗೆ ಹೋಗಲು ನಿಮ್ಮ ಸಹಾಯ ಬೇಕು ಎಂದು ಮನವಿ ಮಾಡುತ್ತಿದ್ದಾರೆ. ಈ ಕಾರ್ಟೂನ್ ಎಲ್ಲರ ಗಮನ ಸೆಳೆಯುತ್ತಿದ್ದು, ಸೋನು ಸೂದ್ ಗಮನಕ್ಕು ಬಂದಿದೆ.
ಇದೀಗ ಆ ಅಭಿಮಾನಿಯ ಮನವಿಗೆ ಸ್ಪಂದಿಸಿರುವ ಸೋನು ‘ಈಗಲೇ ನಿಮ್ಮ ಬ್ಯಾಗ್ ಗಳನ್ನು ಪ್ಯಾಕ್ ಮಾಡಿಕೊಳ್ಳಿ’ ಎಂದು ಹೇಳಿ ಜೋರಾಗಿ ನಗುವ ಇಮೋಜಿಯನ್ನು ಹಾಕಿದ್ದಾರೆ. ಸೋನು ಸೂದ್ ತಮಾಷೆಯ ಉತ್ತರ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ಸದ್ಯಕ್ಕೆ ಬಾರತದಿಂದ ಆಸ್ಟ್ರೇಲಿಯಾಗೆ ತೆರಳುವವರ ಮೇಲೆ ಅಲ್ಲಿನ ಸರ್ಕಾರ ನಿರ್ಬಂಧ ಹೇರಿದೆ. ಹೀಗಾಗಿ ಆಸ್ಟ್ರೇಲಿಯಾ ಆಟಗಾಗರು ಐಪಿಲ್ ರದ್ದಾದರೂ ಭಾರತದಲ್ಲೇ ಉಳಿದುಕೊಳ್ಳುವಂತೆ ಆಗಿದೆ. ಆದ್ರೆ ಆಟಗಾರರು ಬೇರೆ ದೇಶಕ್ಕೆ ತೆರಳಿ ಅಲ್ಲಿ ಕ್ವಾರಂಟೈನ್ ಆಗಿ ಬಳಿಕ ಆಸ್ಟ್ರೇಲಿಯಾಗೆ ವಾಪಸ್ ಆಗುವ ಸಾಧ್ಯತೆಯಿದೆ.