11 ವರ್ಷಗಳು ‘ಅವತಾರ್ 2’ ಗಾಗಿ ಕಾದವರಿಗೆ ಕೊನೆಗೂ ಗುಡ್ ನ್ಯೂಸ್..!

1 min read

11 ವರ್ಷಗಳು ‘ಅವತಾರ್ 2’ ಗಾಗಿ ಕಾದವರಿಗೆ ಕೊನೆಗೂ ಗುಡ್ ನ್ಯೂಸ್..!

11 ವರ್ಷಗಳ ಹಿಂದೆ ಅಂದ್ರೆ 2009ರಲ್ಲಿ ಇಡೀ ವಿಶ್ವವನ್ನೇ ಬೆರಗಾಗಿಸಿದ್ದ 3D ಅನಿಮೇಶನ್ ಸಿನಿಮಾ ಅಂದ್ರೆ ‘ಅವತಾರ್’.. ಈ ಸಿನಿಮಾ ಅಧ್ಬುತ ವಿಶುವಾಲಿಟಿಯಿಂದ  ಹೊಸ ಸೆನ್ಷೇಶನ್ ಕ್ರಿಯೇಟ್ ಮಾಡಿತ್ತು.. ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿತ್ತು ಅವತಾರ್… 3D ಸಿನಿಮಾ ಅಂದ್ರೆ ಹೇಗಿರುತ್ತೆ ಅಂತ ತೋರಿಸಿ ವಿಶ್ವದ ಜನ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದ ಈ ಸಿನಿಮಾದ ಪಾರ್ಟ್ 2 ಸಹ ಬರುತ್ತೆ ಅಂತ 11  ವರ್ಷಗಳ ಹಿಂದೆಯೇ ಅನೌನ್ಸ್ ಮಾಡಲಾಗಿತ್ತು..

ಅವತಾರ್ ಅಭಿಮಾನಿಗಳು ಕೂಡ ಸಿನಿಮಾ ಈ ವರ್ಷ ಬರುತ್ತೆ.. ಮುಂದಿನ ವರ್ಷ ಬರುತ್ತೆ.. ಇಲ್ಲ ಅದ್ರ ಮುಂದಿನ ವರ್ಷ ಅಂತೂ ಬಂದೇ ಬರುತ್ತೆ  ಅನ್ನೋ ನಿರೀಕ್ಷೆಯಲ್ಲೇ ಬರೋಬ್ಬರಿ 11 ವರ್ಷಗಳ ವರೆಗೂ ಅವತಾರ್ ಜಪ ಮಾಡ್ತಾ ಕಾದುಬಿಟ್ಟರು.. ಆದ್ರೀಗ ಅವರಿಗೆ ಒಂದು ಸಮಾಧಾನಕರ ಖುಷಿ ಸಿಕ್ಕಿದೆ..

ಹೌದು … ಕೋವಿಡ್ ಹಾವಳಿ ಎಲ್ಲಾ ತಗ್ಗಿದ ಮೇಲೆ ಈ ವರ್ಷದ ಕೊನೆ ತಿಂಗಳು ಅಂದ್ರೆ ಡಿಸೆಂಬರ್  16 ಕ್ಕೆ ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುವುದು ಪಕ್ಕಾ ಎನ್ನಲಾಗಿದೆ.. ನಿರ್ದೇಶಕ ಜೇಮ್ಸ್ ಕೆಮರೂನ್ ಅಧಿಕೃತವಾಗಿ ಅವತಾರ್ 2 ಡಿಸೆಮಂಬರ್ 16 ಕ್ಕೆ ರಿಲೀಸ್ ಆಗಲಿದೆ ಎಂದು  ಖಚಿತಪಡಿಸಿದ್ದಾರೆ. ಅಂದ್ಹಾಗೆ  ಅವತಾರ್ 3 , ಅವತಾರ್ 4 , ಅವತಾರ್ 5 ಕೂಡ ಬರಲಿದೆ ಎಂಬುದರ ಬಗ್ಗೆಯೂ ಈ ಹಿಂದೆ ನಿರ್ದೇಶಕರು ಮಾಹಿತಿ ನೀಡಿದ್ದರು.. ಅವತಾರ್ 3 2024 ಕ್ಕೆ ರಿಲೀಸ್ ಆಗಲಿದೆ ಎಂದೂ ಸಹ ತಿಳಿಸಿದ್ದರು..

ಕ್ಯಾಮೆರಾ ಮುಂದೆ ಮೈಗೆ ಕಟ್ಟಿಕೊಂಡಿದ್ದ ಟವೆಲ್ ಬಿಚ್ಚಿದ ನಿವೇದಿತಾ :  ಚಂದನ್ ಶಾಕ್   

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd