avatar 2
ವಿಶ್ವದಲ್ಲೇ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಅವತಾರ್ ಸಿನಿಮಾವೂ ಒಂದು. ಈ ಚಿತ್ರದ ಎರಡನೇ ಭಾಗದ ಚಿತ್ರೀಕರಣ ಇನ್ನೇನು ಕೊನೆಯ ಹಂತ ತಲುಪಿದೆ. ಅವತಾರ್ ಚಿತ್ರ ಅದರ ಸೆಟ್ ಹಾಗೂ ದೃಶ್ಯಗಳಿಗೆ ಸಿಕ್ಕಾಪಟ್ಟೆ ಫೇಮಸ್. ಇದೀಗ ಮೊದಲ ಭಾಗಕ್ಕಿಂತ 2 ಭಾಗ ರೋಮಾಂಚನಕಾರಿಯಾಗಿರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣವೂ ಇದೆ. ![]()
ವಿಶೇಷ ಚೇತನರಿಗೆ ಭರವಸೆಯ ಬೆಳಕು: “ಧೀಮನ್ ಸೋಷಿಯಲ್ ವೆಲ್ ಫೇರ್ ಟ್ರಸ್ಟ್”..!
ನ್ಯೂಜಿಲೆಂಡ್‌ನಲ್ಲಿ 2ನೇ ಭಾಗದ ಶೂಟಿಂಗ್ ನಡೆಯುತ್ತಿದೆ. ಇನ್ನೂ ಈವರೆಗೂ 2ನೇ ಭಾಗವೇ ರಿಲೀಸ್ ಆಗಿಲ್ಲ. ಅದಾಗಲೇ 3ನೇ ಭಾಗದ ಬಿಡುಗಡೆಯ ಬಗ್ಗೆ ಮಾಹಿತಿ ಸಿಕ್ಕಿದೆ. ಅವತಾರ್ ಸರಣಿಯ ಒಟ್ಟು ಐದು ಸಿನಿಮಾಗಳು ತಯಾರಾಗಲಿವೆ. ಈಗ ಅವತಾರ್ 2 ಮತ್ತು ಅವತಾರ್ 3 ತಯಾರಾಗುತ್ತಿದೆ. ನಂತರ ಅವತಾರ್ 4 ಮತ್ತು ಅವತಾರ್ 5 ಚಿತ್ರೀಕರಣ ಪ್ರಾರಂಭವಾಗಲಿದೆ. ಅವತಾರ್ 4 ಡಿಸೆಂಬರ್ 18, 2026 ಕ್ಕೆ ಬಿಡುಗಡೆ ಆಗಲಿದೆ. ಅವತಾರ್ 5 ಡಿಸೆಂಬರ್ 22, 2028 ಕ್ಕೆ ಬಿಡುಗಡೆ ಆಗಲಿದೆ. ಲಾಕ್‌ಡೌನ್ ನಿಂದ ಕೆಲ ಕಾಲ ಸ್ಥಬ್ಧವಾಗಿದ್ದ ಅವತಾರ್ ಚಿತ್ರೀಕರಣ ಮತ್ತೆ ಪ್ರಾರಂಭವಾಗಿದ್ದು, ನೀರಿನ ಆಳದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅವತಾರ್ ಮೊದಲ ಭಾಗದಲ್ಲಿ ಪ್ಯಾಂಡೋರಾ ಎಂಬ ಅದ್ಭುತ ಲೋಕ ತೋರಿಸಿದ್ದ ನಿರ್ದೇಶಕ ಜೇಮ್ಸ್ ಕ್ಯಾಮರೂನ್, ಈ ಬಾರಿ ನೀರಿನ ಆಳದಲ್ಲಿ ಅದ್ಭುತ ಲೋಕ ಸೃಷ್ಟಿಮಾಡುತ್ತಿದ್ದಾರೆ.
![]()
ನಿರ್ದೇಶಕ ಜೇಮ್ಸ್ ಕ್ಯಾಮರೂನ್, ಅವತಾರ್ ಸಿನಿಮಾಕ್ಕಾಗಿ ನೀರಿನ ಆಳದಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ. ಟೈಟಾನಿಕ್ ನಾಯಕಿ ಕೇಟ್ ವಿನ್‌ಸ್ಲೆಟ್ ನೀರಿನ ಆಳದಲ್ಲಿ ಅಭಿನಯದಲ್ಲಿ ತೊಡಗಿರುವ ಚಿತ್ರವೊಂದನ್ನು ಅವತಾರ್ 2 ಚಿತ್ರತಂಡ ಬಿಡುಗಡೆ ಮಾಡಿದೆ. ಈ ಚಿತ್ರ ಿದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿಬಿಟ್ಟಿದೆ. ಈ ಚಿತ್ರದಲ್ಲಿ ಏಳು ನಿಮಿಷ ಉಸಿರು ಬಿಗಿ ಹಿಡಿಯುತ್ತಾರಂತೆ ಕೇಟ್. ನೀರಿನ ದೇವತೆಯ ಪಾತ್ರದಲ್ಲಿ ಕೇಟ್ ವಿನ್‌ಸ್ಲೆಟ್ ಕಾಣಿಸಿಕೊಳ್ತಾಯಿದ್ದು, ಅವರ ಪಾತ್ರದ ಬಹುತೇಕ ಚಿತ್ರೀಕರಣ ನೀರಿನ ಆಳದಲ್ಲಿಯೇ ನಡೆಯುತ್ತಿದೆ. ನೀರಿನ ಆಳದಲ್ಲಿ ಉಸಿರು ಬಿಗಿಹಿಡಿದುಕೊಂಡು ಚಿತ್ರೀಕರಣ ನಡೆಸುತ್ತಿದ್ದಾರಂತೆ. ಮೂಲಗಳ ಪ್ರಕಾರ, ಏಳು ನಿಮಿಷಗಳ ಕಾಲ ಕೇಟ್ ವಿನ್ಸ್‌ಲೆಟ್ ಉಸಿರು ಬಿಗಿಹಿಡಿಯುತ್ತಾರಂತೆ.
avatar 2
ಗಂಗಾವತಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದ ಪುನೀತ್ ರಾಜ್ ಕುಮಾರ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







