ಅಯೋಧ್ಯೆ: ಬೆಳಕಿನ ಹಬ್ಬ ದೀಪಾವಳಿಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯ(Ayodhya)ಲ್ಲಿ ದಾಖಲೆಯ ದೀಪೋತ್ಸವ ನಡೆದಿದೆ.
ಸರಯು ನದಿಯ ದಂಡೆಯ ಮೇಲಿನ ದೇವಾಲಯ ನಗರವು ತನ್ನದೇ ಆದ ವಿಶ್ವ ದಾಖಲೆ ಮಾಡಿದೆ. ರಾಮ್ ಕಿ ಪೈಡಿ ಸೇರಿದಂತೆ ಅಯೋಧ್ಯೆಯ 51 ಘಾಟ್ಗಳಲ್ಲಿ 22,23,000 ದೀಪಗಳನ್ನು ಬೆಳಗಿಸುವ ಮೂಲಕ ಉತ್ತರಪ್ರದೇಶ ಸರ್ಕಾರ 6 ನೇ ಗಿನ್ನೆಸ್ ವಿಶ್ವ ದಾಖಲೆ(Guinness World Record ) ಮಾಡಿದೆ. ಇದೇ ಸಮಯದಲ್ಲಿ 2022ರಲ್ಲಿ ಸರ್ಕಾರವು 16 ಲಕ್ಷ ದೀಪಗಳನ್ನು ಬೆಳಗಿಸಿ ಗಿನ್ನೆಸ್ ದಾಖಲೆ ಮಾಡಿತ್ತು.
ಈ ಸಂದರ್ಭದಲ್ಲಿ ದೀಪೋತ್ಸವ ಮೆರವಣಿಗೆ ಕೂಡ ನಡೆಯಿತು. ರಾಮನ ಸಾರವನ್ನು ಚಿತ್ರಿಸುವ 18 ವಿಸ್ಮಯ-ಸ್ಫೂರ್ತಿದಾಯಕ ಮತ್ತು ದೈವಿಕ ಸ್ತಬ್ದ ಚಿತ್ರಗಳನ್ನು ಪ್ರದರ್ಶಿಸಲಾಯಿತು.