ನನಗೆ ಯಾವುದೇ ಮುನಿಸಿಲ್ಲ : ಬಿ.ಶ್ರೀರಾಮುಲು
ಬಳ್ಳಾರಿ : ನನಗೆ ಯಾವುದೇ ಮುನಿಸಿಲ್ಲ. ನಾನು ಮುಂಚೆಯಿಂದ ಹೇಳ್ತಾ ಇದ್ದೇನೆ, ನಾನು ನಿಷ್ಠಾವಂತ ಕಾರ್ಯಕರ್ತ ಎಂದು ಮಾಜಿ ಸಚಿವ ಬಿ ಶ್ರೀ ರಾಮುಲು ಹೇಳಿದ್ದಾರೆ.
ಡಿಸಿಎಂ ಆಕಾಂಕ್ಷಿ ಬಿ ಶ್ರೀ ರಾಮುಲು, ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಪದಗ್ರಹಣ ಮಾಡಿದ ಕಾರ್ಯಕ್ರಮಕ್ಕೆ ಗೈರಾಗಿದ್ದದ್ದು ಕಾಣುತ್ತಿತ್ತು.
ರಾಮುಲು ಡಿಸಿಎಂ ಸ್ಥಾನದ ವಿಚಾರವಾಗಿ ಅಸಮಾಧನ ಏರ್ಪಟ್ಟಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೇ ಕಾರಣಕ್ಕೆ ಅವರು ಬಸವರಾಜ ಬೊಮ್ಮಾಯಿ ಅವರ ಪದಗ್ರಹಣ ಕಾರ್ಯಕ್ರಮದಿಂದ ದೂರ ಉಳಿದುಕೊಂಡಿದ್ದರು ಎಂದು ಊಹಾಪೋಹಗಳು ಹರಿದಾಡುತ್ತಿವೆ. ಇದೀಗ ಈ ಬಗ್ಗೆ ಸ್ವತಃ ರಾಮುಲು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಬಳ್ಳಾರಿಯಲ್ಲಿ ಗುರುವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಶ್ರೀರಾಮುಲು, ಬಹಳ ದಿನದಿಂದ ನಿಗದಿಯಾಗಿದ್ದ ಪೂಜೆಯಲ್ಲಿ ಭಾಗಿಯಾಗಿದ್ದೆ. ನನಗೆ ಯಾವುದೇ ಮುನಿಸಿಲ್ಲ.
ನಾನು ಮುಂಚೆಯಿಂದ ಹೇಳ್ತಾ ಇದ್ದೇನೆ, ನಾನು ನಿಷ್ಠಾವಂತ ಕಾರ್ಯಕರ್ತ. ಅನೇಕ ವರ್ಷಗಳಿಂದ ಕೆಲಸ ಮಾಡಿದ್ದೇನೆ, ನಮಗೆ ಪಕ್ಷ ಮುಖ್ಯವಾಗತ್ತೆ.
ನಾನು ಆರು ಚುನಾವಣೆ ಗೆದ್ದು, ಮೂರು ಭಾರಿ ಮಂತ್ರಿಯಾಗಿದ್ದೇನೆ. ನಮ್ಮ ಪಾರ್ಟಿ ಮೇಲೆ ವಿಶ್ವಾಸ ಇದೆ. ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ತಾರೆ ಎಂದು ಹೇಳಿದ್ದಾರೆ.