ಬಾಹುಬಲಿ ಖ್ಯಾತಿಯ ಬಲ್ಲಾಳದೇವ ಅಂದ್ರೆ ನಟ ರಾಣಾ ದಗ್ಗುಬಾಟಿ ಅವರು ಸದ್ಯ ಮದುವೆ ಸಂಭ್ರಮದಲ್ಲಿದ್ದಾರೆ. ಆಗಸ್ಟ್ -8 ರಂದು ರಣ ದಗ್ಗುಬಾಟಿ ಅವರು ಮಿಹಿಕಾ ಬಜಾಜ್ ಅವರೊಂದಿಗೆ ಹಸೆಮಣೆ ಏರಲಿದ್ದು, ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ಈ ಜೋಡಿಯ ವಿವಾಹ ಸಮಾರಂಭಕ್ಕಾಗಿ ರಾಮಾನಾಯ್ಡು ಸ್ಟುಡಿಯೋವನ್ನು ಈಗಾಗಲೇ ಅಲಂಕರಿಸಲಾಗಿದ್ದು, ಸಕಲ ಸಿದ್ಧತೆಗಳನ್ನು ನಡೆಸಿಕೊಳ್ಳಲಾಗುತ್ತಿದೆ. ಇನ್ನೂ ಕೊರೊನಾ ಬಿಕ್ಕಟ್ಟಿನಿಂದಾಗಿ ಕೆಲವೇ ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ರಾಣಾ – ಮಿಹಿಕಾ ವಿವಾಹ ಬಂಧನಕ್ಕೊಳಗಾಗಲಿದ್ದಾರೆ. 
ಆದ್ರೆ ರಾಣಾ ದಗ್ಗುಬಾಟಿಯ ಆಪ್ತ ಗೆಳೆಯರಾದ ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ವಿವಾಹ ಸಮಾರಂಭದಿಂದ ದೂರ ಉಳಿಯಲಿದ್ದಾರೆ. ರಾಜಮೌಳಿ ಹಾಗೂ ಕುಟುಂಬದವರಿಗೆ ಕೊರೊನಾ ಪಾಸಿಟಿವ್ ಇದ್ದ ಹಿನ್ನೆಲೆ ಅವರು ತಮ್ಮ ಆಪ್ತ ಗೆಳೆಯನ ವಿವಾಹ ಸಮಾರಂಭಕ್ಕೆ ಗೈರಾಗಲಿದ್ದಾರೆ. ಇನ್ನೂ ಕೊರೊನಾ ಆತಂಕದ ನಡುವೆ ಮದುವೆಯಾಗ್ತಿರುವ ಹಿನ್ನೆಲೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮದುವೆ ಕೇವಲ 30 ಜನರಿಗಷ್ಟೇ ಆಹ್ವಾನವಿದ್ದು, ಮದುವೆಯಲ್ಲಿ ಭಾಗವಹಿಸುವ ಎಲ್ಲರೂ ಮೊದಲೇ ಕೊರೊನಾ ಪರೀಕ್ಷೆಗೆ ಒಳಪಡಲಿದ್ದಾರೆ. ರಿಪೋರ್ಟ್ ನೆಗೆಟಿವ್ ಇದ್ದವರಷ್ಟೆ ಮದುವೆಯಲ್ಲಿ ಭಾಗವಹಿಸುತ್ತಾರೆ. ಮದುವೆ ಮಂಟಪವನ್ನೂ ಸಹ ಮೊದಲೇ ಪೂರ್ಣವಾಗಿ ಸ್ಯಾನಿಟೈಸ್ ಮಾಡಿಸಲಾಗಿರುತ್ತೆ ಎಂದು ದಗ್ಗುಬಾಟಿ ಅವರ ತಂದೆ ತಿಳಿಸಿದ್ದಾರೆ.









